HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸಾವ್ಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಮಹಾ ಪೂಜೋತ್ಸವ.

  ಸಾವ್ಯ : ಸಾಂತ್ಯಾಲು-ಸಾವ್ಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಮಹಾಪೂಜೋತ್ಸವವು ಇತ್ತೀಚೆಗೆ ಜರುಗಿತು. ಕೇಳ ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಅನಂತ ಅಸ್ರಣ್ಣ ಮಾತನಾಡಿ ಇಷ್ಟೊಂದು ಅಚ್ಚು ಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ಹತ್ತು ಹಲವು ಕಾರ್ಯಕ್ರಮ ನಡೆಯಲಿ, ದೇವರ ಅನುಗ್ರಹ ಎಲ್ಲಾರ ಮೇಲೆ ಇರಲಿ ಎಂದು ಧಾರ್ಮಿಕ ಪ್ರವಚನ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹರೀಶ್ ಪೂಂಜಾ ಈ ಹಳ್ಳಿ ಪ್ರದೇಶದಲ್ಲಿ ಇಂತಹದೊಂದು ಕಾರ್ಯಕ್ರಮ ಆಯೋಜಿಸುತ್ತಿರುವುದು ಅವಿಸ್ಮರಣೀಯ ನಿಮ್ಮ ಯಾವುದೇ ಕಾರ್ಯಕ್ರಮಗಳಿಗೆ ನಾವು ಸದಾ ಸಿದ್ದರಿದ್ದೇವೆ ಎಂದರು. ವೇದಿಕೆಯಲ್ಲಿ ಶ್ರೀಮತಿ ಲಲಿತಾ ಹೆಗ್ಡೆ, ನಾಲ್ಕೂರುಗುತ್ತು ಪಾರ್ಶ್ವನಾಥ ಬಂಗ, ವಲಯ ಹೆಗ್ಡೆ ಸಂಘದ ಅಧ್ಯಕ್ಷ ಜಗದೀಶ್ ಹೆಗ್ಡೆ, ಗ್ರಾ.ಪಂ ಸದಸ್ಯ ವಿಠಲ ಸುವರ್ಣ, ಗುಜ್ಜೊಟ್ಟು-ಸಾವ್ಯ ಅಯ್ಯಪ್ಪ ಭಜನ ಸಮಿತಿ ಅಧ್ಯಕ್ಷ ಶ್ರೀಧರ ಪೂಜಾರಿ, ಪೆರಾಡಿ ಜೋಗಬೆಟ್ಟು ಯಶೋಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಳ-ಕಾಶಿಪಟ್ಣ ದೇವಸ್ಥಾನ ಪ್ರಧಾನ ಅರ್ಚಕ ಅನಂತ ಅಸ್ರಣ್ಣ, ಯಶೋಧರ ಆಚಾರ್ಯ, ಭಾಗವತ ಕರುಣಾಕರ, ಕಥೆ ಸುರೇಶ್ ಆಚಾರ್ಯ, ಹಿರಿಯರು ಬಾಬು ಹೆಗ್ಡೆ ಸಾವ್ಯಗುತ್ತು, ವಕೀಲರು ನವೀನ್ ಶೆಟ್ಟಿ, ಕೃಷಿಕ ಶ್ರೀಧರ ಪೂಜಾರಿ, ಹಾಗೂ ಹರೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಗುರುಸ್ವಾಮಿ ಜಯರಾಜ್ ಹೆಗ್ಡೆ ಸ್ವಾಗತಿಸಿದರು. ಯಶೋಧರ ಬಂಗೇರ ಮತ್ತು ಶೇಖರ ಸುವರ್ಣ ಕಾರ್ಯಕ್ರಮ ನಿರೂಪಿಸಿ, ಮನೋಜ್ ಹೆಗ್ಡೆ ಮರೋಡಿ ವಂದಿಸಿದರು. ನಂತರ ಊರಿನವರೇ ಜಯರಾಜ್ ಹೆಗ್ಡೆ ಸಾವ್ಯ ಸಂಯೋಜನೆಯ ಆರ್. ಸುಕೇಶ್ ಆಚಾರ್ಯ ಪೆರಾಡಿ ವಿರಚಿತ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ಸಂಗೀತ ರಚನೆಯ ಕಾರ್ಣಿಕದ ಜುಮಾದಿ ಎಂಬ ತುಳು ನೂತನ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡು ಎಲ್ಲಾರ ಮೆಚ್ಚುಗೆಗೆ ಪಾತ್ರವಾಯಿತು. 20 ಅಯ್ಯಪ್ಪ ವೃತಧಾರಿಗಳು ಶಬರಿಮಲೆಗೆ ತೆರಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.