ಬೆದ್ರಬೆಟ್ಟು ಬಂಗಾಡಿ ಮರಿಯಾಂಬಿಕಾ ನೂತನ ಚರ್ಚ್ ಉದ್ಘಾಟನೆ.

Advt_NewsUnder_1
Advt_NewsUnder_1
Advt_NewsUnder_1

 ಬಂಗಾಡಿ : ಇಲ್ಲಿಯ ಬೆದ್ರಬೆಟ್ಟು ಮರಿಯಾಂಬಿಕ ದೇವಾಲಯದ ನೂತನ ಚರ್ಚ್ ಹಾಗೂ ಧರ್ಮಗುರುಗಳ ನಿವಾಸದ ಉದ್ಘಾಟನೆಯನ್ನು ಎ.14ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಬಿಷಪ್ ಲಾರೆನ್ಸ್ ಮುಕ್ಕುಯಿ ಲೋಕಾರ್ಪಣೆಗೈದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಗಾರ್ ಜೆರಾಲ್ ವಂ.ಫಾ| ಜೋಸ್ ವಲಿಯ ಪರಂಬಿಲ್, ಕಿಲ್ಲೂರು ಮಸೀದಿಯ ಹಾಜಿ ಅಬ್ದುಲ್ ರಹಿಮಾನ್, ಬಂಗಾಡಿ ಸಿ.ಎ ಬ್ಯಾಂಕಿನ ಅಧ್ಯಕ್ಷ ಲಕ್ಷ್ಮಣ ಗೌಡ, ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇರಿ, ಕೆ.ಎಸ್.ಎಂ.ಸಿ.ಎ ರಾಜ್ಯ ಅಧ್ಯಕ್ಷ ಕೆ.ಕೆ ಸೆಬಾಸ್ಟಿಯನ್. ತಲಶ್ಯೇರಿ ಪ್ರೊವಿನ್ಸಿಯಲ್ ಸುಪಿರಿಯಲ್ ವಂ. ಸಿ| ಪೆಟ್ಟಿಟ್ ತ್ರೇಸಾ ಸಬ್ಸ, ವಂ.ಫಾ| ಅಬ್ರಾಹಂ ಪಟ್ಟೇರಿಲ್, ಇಂದಬೆಟ್ಟು ಚರ್ಚ್‌ನ ಧರ್ಮಗುರು ವಂ. ಫಾ| ಸ್ಟೀಫನ್ ಡಿಸೋಜ, ಇಂದಬೆಟ್ಟು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ನೇತ್ರಾವತಿ, ಮಿತ್ತಬಾಗಿಲು, ಗ್ರಾ.ಪಂ ಅಧ್ಯಕ್ಷ ನಾರಾಯಣ ಪಾಟಾಳಿ, ಗ್ರಾ.ಪಂ ಸದಸ್ಯ ಜೋಸ್ ಇ.ಎಂ, ಶ್ರೀಮತಿ ಶೀಲಾ ಪ್ರಾನ್ಸಿಸ್, ಹರೀಶ್ ಸಾಲಿಯಾನ್, ಯಶೋಧರ ಬಲ್ಲಾಳ್, ಇಂಜಿನಿಯರ್ ಜಾರ್ಜ್, ಚರ್ಚ್‌ನ ಧರ್ಮಗುರು ವಂ.ಫಾ| ಶಾಜಿ ಮಾಥ್ಯು, ಉಪಾಧ್ಯಕ್ಷರುಗಳಾದ ಸುನ್ನಿ ಮುಟ್ಟಾಟ್, ಸಜಿ.ಓ.ಎಂ, ಜಿಸ್ ಜೋಸ್, ವರ್ಗೀಸ್ ವಿ, ಕಾರ್ಯದರ್ಶಿ ಪ್ರಶಾಂತ್ ಸಿ.ಡಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.