ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅರ್ಧ ಏಕಾಹ ಭಜನಾ ಕಾರ್ಯಕ್ರಮ.

 ನಾಳ: ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ನಾಳದಲ್ಲಿ ಅರ್ಧ ಏಕಾಹ ಭಜನಾ ಕಾರ್ಯಕ್ರಮವು  ಎ.14 ರಂದು  ಜರುಗಿತು. ಇಲ್ಲಿನ  ಪ್ರಧಾನ  ಅರ್ಚಕ  ರಾಘವೇಂದ್ರ ಅಸ್ರಣ್ಣ ರವರು ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಳ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ವಸಂತ ಮಜಲು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಕೇಂದ್ರ ಕಛೇರಿ ನಿರ್ದೇಶಕ ಜಯರಾಮ ನೆಲ್ಲಿತ್ತಾಯ,  ಶಿರೂರು ಮಠದ ದಿವಾನರಾದ ಲಾತವ್ಯ ಆಚಾರ್ಯ,  ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಶಶಿಧರ ಶೆಟ್ಟಿ ಹೀರ್ಯ, ಅಭಿವೃಧ್ಧಿ  ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಹಿರಿಯ ಭಜನಾಕಾರರಾದ ನಾರಾಯಣ ಆಚಾರ್ಯ, ಶ್ರೀ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆನಂದ ಶೆಟ್ಟಿ ಐಸಿರಿ, ಯಂ.ಜನಾರ್ಧನ ಗೇರುಕಟ್ಟೆ, ದಿನೇಶ ಗೌಡ ಕಲಾಯಿತೊಟ್ಟು ,ಕೆ.ಎನ್.ಬಾಬು ನಾಳ, ಶ್ರೀಮತಿ ಅಂಬಾ.ಬಿ ಆಳ್ವ ನಾಳ,  ಶ್ರೀಮತಿ ವಿಜಯ ಎಚ್.ಪ್ರಸಾದ್, ಶ್ರೀಮತಿ ಭಾರತಿ ವಸಂತ ವಂಜಾರೆ ಇವರುಗಳು ಉಪಸ್ಥಿರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.