ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳಿನಿಂದ ಉಚಿತ ತರಬೇತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್‌ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು:

1. ಮಹಿಳೆಯರ ಟೈಲರಿಂಗ್ (30 ದಿನಗಳು) : 23.04.2018 ರಿಂದ 22.05.2018 ರವರೆಗೆ
2. ಕಂಪ್ಯೂಟರ್ ಡಿ.ಟಿ.ಪಿ (45 ದಿನಗಳು) : 05.2018 ರಿಂದ 15.06.2018 ರವರೆಗೆ
3. ಸಿಸಿ ಕ್ಯಾಮರಾ ಆಳವಡಿಸುವಿಕೆ (13 ದಿನಗಳು) :10.05.2018 ರಿಂದ 23.05.2018 ರವರೆಗೆ
4. ಮಲ್ಟಿ ಪೋನ್ ಸರ್ವಿಸ್ (ಮೊಬೈಲ್ ರಿಪೇರಿ) 30 ದಿನಗಳು) : 17.05.2018 ರಿಂದ 15.06.2018 ರವರೆಗೆ
5 . ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ (10 ದಿನಗಳು) : 21.05.2018 ರಿಂದ 30.05.2018 ರವರೆಗೆ
6. ಕಂಪ್ಯೂಟರೈಸ್‌ಡ್ ಎಕೌಂಟಿಂಗ್ (30 ದಿನಗಳು) : 24.05.2018 ರಿಂದ 22.06.2018 ರವರೆಗೆ
7. ಪಂಪ್ ಸೆಟ್ ಮತ್ತು ಮೋಟಾರ್ ರಿವೈಂಡಿಂಗ್ (30 ದಿನಗಳು) : 01.06.2018 ರಿಂದ 30.06.2018 ರವರೆಗೆ
ಮೊದಲಾದ ತರಬೇತಿಗಳನ್ನು ಆಯೋಜಿಸಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳು ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ತರಬೇತಿಗಳಿಗೆ ಬರಲು 15 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ -574240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ online ವೆಬ್‌ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಗೆ ಸಂಪರ್ಕಿಸಬಹುದು ಎಂದು ರುಡ್ ಸೆಟ್ ಸಂಸ್ಥೆ ಪ್ರಕಟನಣೆಯಲ್ಲಿ ತಿಳಿಸಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.