ರೂ.1 ಕೋಟಿ ವೆಚ್ಚದ ಬಳ್ಳಮಂಜ ದೇವಸ್ಥಾನದ ಕಾಮಗಾರಿ ಪ್ರಗತಿಯಲ್ಲಿ

Advt_NewsUnder_1
Advt_NewsUnder_1
Advt_NewsUnder_1

  ಮಚ್ಚಿನ : ದ.ಕ ಜಿಲ್ಲೆಯ ಬೆಳ್ತಂಗಡಿ ತಾ. ಮಚ್ಚಿನ ಗ್ರಾಮದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನವು ಪುರಾಣ ಪ್ರಸಿದ್ಧವಾದ ತುಳುನಾಡಿನ ನಾಗ ಕ್ಷೇತ್ರಗಳಲ್ಲಿ ಒಂದಾಗಿದ್ದು ಸುಮಾರು ಸಹಸ್ರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಕಾರಣೀಕ ಕ್ಷೇತ್ರವಾಗಿದೆ.
ನಂಬಿ ಬಂದ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸ್ವಾಮಿಯು, ಮಂಗಳೂರು ಸಮೀಪದ ಕುಡುಪುವಿನಿಂದ ಇಲ್ಲಿ ಬಂದು ಆವಿರ್ಭವಿಸಿ ಬಳ್ಳಮಂಜೇಶನಾಗಿ ನೆಲೆಯೂರಿನಿಂತ ಇತಿಹಾಸವಿದೆ. ತುಳುನಾಡಿನ ಇತಿಹಾಸದ ಪ್ರಕಾರ ಈ ಕ್ಷೇತ್ರಕ್ಕೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ. ಪೂರ್ವಶಿಷ್ಠ ಸಂಪ್ರದಾಯದಂತೆ ಕಟ್ಟು ಕಟ್ಟಳೆಗಳನ್ನು ನಿತ್ಯ ವಿಧಿ ವಿಧಾನಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶ್ರೀ ದೇವರ ಗರ್ಭಗುಡಿ ಮೂಲ ಸ್ಥಾನ, ಅನಂತ ತೀರ್ಥಕೆರೆ, ನಾಗನಕಟ್ಟೆ, ಶಿಲಾಮಯ ದೇವಸ್ಥಾನ, ರಜತಪಲ್ಲಕ್ಕಿ, ಮೊದಲಾದ ಅಭಿವೃದ್ಧಿ ಕಾರ್ಯಗಳು ಈ ಹಿಂದೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಹೊರ ಪ್ರಾಂಗಣದ ಮೇಲ್ಛಾವಣಿ, ಶಿಲಾಮಯ ವಸಂತ ಮಂಟಪ, ಅಂಗಣ ಬಂಡಿ, ಅನಂತ ಪ್ರಸಾದ, ಅನ್ನಛತ್ರ, ಶಿಲಾಮಯ ಒಳಸುತ್ತು ಪೌಳಿ, ಇಂಟರ್‌ಲಾಕ್, ಬ್ರಹ್ಮರಥ ಚಂದ್ರಮಂಡಲ ರಥ, ಅತಿಥಿ ಗ್ರಹಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಸಿ.ಸಿ ಕೆಮರಾ, ಭದ್ರತಾ ಅಲರಾಂ, ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಶಿಲಾಮಯ ಒಳಸುತ್ತು ಪೌಳಿಯನ್ನು ನಿರ್ಮಿಸಿ 2014 ರಲ್ಲಿ ಶ್ರೀ ಸ್ವಾಮಿಗೆ ಬ್ರಹ್ಮಕಲಶಾಭಿಷೇಕವು ನೆರವೇರಿಸಲಾಗಿದೆ.
ಪ್ರಕೃತ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಶಿಲಾಮಯ ಹೊರ ಸುತ್ತಪೌಳಿಯ ಜೀರ್ಣೋದ್ಧಾರವನ್ನು ಕೈಗೊಂಡಿದ್ದು ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ನವೀಕೃತ ಹೊರ ಗೋಪುರವು ಶ್ರೀ ಅನಂತೇಶ್ವರ ಸ್ವಾಮಿಗೆ ಸಮರ್ಪಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.