ನೆಟ್ ಬಾಲ್ ಅಂತರಾಷ್ಟ್ರೀಯ ಆಟಗಾರ ನಿತಿನ್ ಪೂಜಾರಿಯವರಿಗೆ ಶ್ರೀ ಗುರುಮಿತ್ರ ಸಮೂಹದಿಂದ ಸನ್ಮಾನ.

ಬೆಳ್ತಂಗಡಿ: ಮಲೇಶಿಯಾದಲ್ಲಿ ನಡೆದ 2 ನೇ ಏಷ್ಯನ್ ಕಪ್ ನೆಟ್ ಬಾಲ್ ಪಂದ್ಯಾಟದಲ್ಲಿ ಭಾರತ ತಂಡದ ಉಪನಾಯಕರಾಗಿ ಆಟದೊಂದಿಗೆ ಭಾರತಕ್ಕೆ ಚಿನ್ನದ ಪದಕ ತಂದಿರುವ ಉಜಿರೆ ಶ್ರೀ ಧ.ಮಂ ಕಾಲೇಜು ಸ್ನಾತ್ತಕೋತ್ತರ ವಿಭಾಗದ ವಿದ್ಯಾರ್ಥಿ ನಿತಿನ್ ಪೂಜಾರಿ ಯವರನ್ನು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶ್ರೀ ಗುರುಮಿತ್ರ ಸಮೂಹದ ದಶಮಾನೋತ್ಸವ ಅಂಗವಾಗಿ ನಡೆದ ಅಂತರ್ ಯುವ ಮಂಡಲಗಳ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ಗುರುಮಿತ್ರ ಸಮೂಹದ ಅಧ್ಯಕ್ಷ ಸ್ಮಿತೇಶ್ ಎಸ್.ಬಾರ್ಯ, ಪೂರ್ವಾಧ್ಯಕ್ಷರಾದ ಸುಜಾತ ಅಣ್ಣಿ ಪೂಜಾರಿ, ಚಿದಾನಂದ ಇಡ್ಯ, ಸ್ಥಾಪಕ ಅಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು, ದ.ಕ ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲಿಯಾನ್, ಜೆ.ಸಿ.ಐ  ವಲಯ 15 ರ ಉದಯ ಸಂಪಾದಕ ವಸಂತ ಶೆಟ್ಟಿ, ನೆಹರೂ ಯುವ ಕೇಂದ್ರದ ಪ್ರತಿನಿಧಿ ಸಾಂತಪ್ಪ, ಕಾಮಿಡಿ ಕಿಲಾಡಿ ಅನಿಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.