HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರ.

  ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಗೆ ಭಾರತ ಸರಕಾರದ ಸ್ವಚ್ಛ ಭಾರತ್ ಸ್ವಚ್ಛ ವಿದ್ಯಾಲಯಪುರಸ್ಕಾರದ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಮತ್ತು ಶುಚಿತ್ವಕ್ಕಾಗಿ ನೀಡಲ್ಪಡುವ 2017 ರ ರಾಜ್ಯ ಮಟ್ಟದ ಪುರಸ್ಕಾರ ಪಡೆದಿರುತ್ತದೆ. ಜಿಲ್ಲಾ ಮಟ್ಟದ ತಂಡದ ಪರಿಶೀಲನೆಯ ನಂತರ ಆಯ್ಕೆ ಮಾನದಂಡಗಳಿಗನುಸಾರವಾಗಿ ವಿವಿಧ ವಿಭಾಗಗಳಲ್ಲಿ ಪುರಸ್ಕಾರಕ್ಕೆ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ. ಈ ರೀತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಯು ಅತ್ಯುತ್ತಮ ನೀರಿನ ಮತ್ತು ಶುಚಿತ್ವದ ವ್ಯವಸ್ಥೆಗಾಗಿ ಈ ಪುರಸ್ಕಾರವನ್ನು ಪಡೆದಿರುತ್ತದೆ. ಬೆಳಾಲು ಪ್ರೌಢಶಾಲೆಯು ಅತ್ಯುತ್ತಮ ಮೂಲ ಸೌಕರ್‍ಯಗಳೊಂದಿಗೆ, ಉಚಿತ ಕಂಪ್ಯೂಟರ್ ಶಿಕ್ಷಣ, ಸುಸಜ್ಜಿತ ವಾಚನಾಲಯ, ಕ್ರೀಡಾ ಸೌಲಭ್ಯ, ಉತ್ತಮ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಿಶೇಷವಾದ ಜಲ ಮರುಪೂರಣ ಕಾರ್‍ಯಕ್ರಮಗಳಿಗಾಗಿ 2016ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಅತ್ಯುತ್ತಮ ಶಾಲೆ ಪುರಸ್ಕಾರವನ್ನೂ ಶಿಕ್ಷಣ ಇಲಾಖೆಯಿಂದ ಪಡೆದು ಗುರುತಿಸಲ್ಪಟ್ಟ ಸಂಸ್ಥೆಯಾಗಿರುವುದು ಉಲ್ಲೇಖನೀಯ. ಡಾ. ಡಿ. ವೀರೇಂದ್ರ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಹಳ್ಳಿ ಪ್ರದೇಶದ ಈ ಶಾಲೆಗೆ ಬಂದ ಪುರಸ್ಕಾರ ಬೆಳಾಲು ಗ್ರಾಮಕ್ಕೆ ಹೆಮ್ಮೆ ತರುವ ಸಾಧನೆಯೆಂದು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.