HomePage_Banner_
HomePage_Banner_

ಒಡಿಯೂರು ವಿವಿಧೋದ್ದೇಶ ಸಹಕಾರಿ ಶಾಖೆ ಉದ್ಘಾಟನೆ.

  ಬೆಳ್ತಂಗಡಿ: ಒಂದೇ ಉದ್ದೇಶಕ್ಕಾದರೆ ಜನ ಸಾಮಾನ್ಯರಿಗೆ ಆಧ್ಯಾತ್ಮ ಮಾತ್ರ ಸಾಕು. ಎಲ್ಲರಿಗೂ ಉಪಯೋಗವಾಗುವ ರೀತಿಯಲ್ಲಿ ಸೇವೆ ಮಾಡೋದಾದರೆ ವಿವಿಧೋದ್ದೇಶದ ಕಲ್ಪನೆ ಇರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಜ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಅವರು ಎ.9 ರಂದು ಬೆಳ್ತಂಗಡಿಯ ರೋಯಲ್ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭ ಗೊಂಡಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಶಾಖೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟನೆಗೊಳಿಸಿ ಆಶೀರ್ವಚನ ನೀಡಿದರು.
ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಯವರು ಸಂಸ್ಥೆಯ ಬೆಳವಣಿಗೆಗೆ ಕಾರಣವಾದ ಎಲ್ಲರನ್ನೂ ಅಭಿನಂದಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಶಾಖೆಯ ಸಲಹಾ ಸಮಿತಿಯ ರಘುರಾಮ ಶೆಟ್ಟಿ ಸಾಧನಾ ಉಜಿರೆ, ಬಾಲಕೃಷ್ಣ ಶೆಟ್ಟಿ ಕಾರ್ಯಾಣ ಪಡಂಗಡಿ, ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಎ.ಸುರೇಶ್ ರೈ ಉಪಾಧ್ಯಕ್ಷ ಟಿ.ತಾರಾನಾಥ ಉಚ್ಚಿಲ, ಕೆ.ಎಂ. ಯೂಸುಫ್ ಉಪಸ್ಥಿತರಿದ್ದರು.ಸಂಸ್ಥೆಯ ಉಪಾಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿರಖು ಠೇವಣಿ ಇಟ್ಟ ಪೂರ್ಣಿಮಾ.ವೈ ಸಾಲ್ಯಾನ್ ಮತ್ತು ಉಳಿತಾಯ ಖಾತೆ ತೆರೆದ ರಾಮಣ್ಣ ಶೆಟ್ಟಿ ಮತ್ತು ಹರಿಣಾಕ್ಷಿಯವರಿಗೆ ಸ್ವಾಮೀಜಿಯವರು ಪ್ರಮಾಣ ಪತ್ರವನ್ನು ನೀಡಿದರು. ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಎ.ಸುರೇಶ್ ರೈ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಒಡಿಯೂರು ನಿರೂಪಿಸಿದರು. ನಿತ್ಯಾನಂದ ಶೆಟ್ಟಿ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.