ಪ್ರಚಾರ ಆರಂಭಿಸಿದ ಬಂಗೇರ, ಬಿಜೆಪಿಯಲ್ಲಿ ಮುಂದುವರಿದ ಕಸರತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ: ರಾಜ್ಯ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲು ಕೇವಲ ಐದು ದಿನಗಳು ಮಾತ್ರ ಬಾಕಿಯಿದ್ದು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬೀಸಿಯೇರ ತೊಡಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಅಭ್ಯರ್ಥಿಯನ್ನು ಅಧಿಕೃತಗೊಳಿಸಿದ್ದು, ಪ್ರಚಾರ ಸಭೆ ಆರಂಭಿಸಿದೆ. ಆದರೆ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದ್ದು, ಕಾರ್ಯಕರ್ತರಲ್ಲಿ ಗೊಂದಲ ಕುತೂಹಲ ಮುಂದುವರಿದಿದೆ.
ಕಾಂಗ್ರೆಸ್‌ನಲ್ಲಿ ಬಂಗೇರ : ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕ ಕೆ. ವಸಂತ ಬಂಗೇರ ಅವರೇ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಪಕ್ಷದ ಹೈಕಮಾಂಡ್ ಅವರಿಗೆ ಸೂಚನೆ ನೀಡಿದ್ದು, ಅವರು ಈಗಾಗಲೇ ತಾಲೂಕಿನಾದ್ಯಂತ ಒಂದು ಹಂತದ ಪ್ರಚಾರ ಕಾರ್ಯವನ್ನು ಪೂರ್ತಿಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ಗರ್ಡಾಡಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ಘಾಟಸಿ ಪ್ರತಿ ಬೂತು ಮಟ್ಟದಲ್ಲಿ ಪ್ರಚಾರ ಸಭೆಯನ್ನು ಆರಂಭಿಸಿದೆ. ಈಗಾಗಲೇ `ಕಾಂಗ್ರೆಸ್ ನಡಿಗೆ ಮತದಾರರ ಕಡೆಗೆ’ ಕಾರ್ಯಕ್ರಮವನ್ನು ಕಾಂಗ್ರೆಸ್ ಆರು ತಿಂಗಳ ಹಿಂದೆಯೇ ಆರಂಭಿಸಿ ಮತದಾರರ ಮನೆ, ಮನೆ ಭೇಟಿಯನ್ನು ಪೂರ್ತಿಗೊಳಿಸಿದೆ. ಶಾಸಕ ಬಂಗೇರರು ತಾಲೂಕಿನಲ್ಲಿ ಮಾಡಿರುವ ಸಾಧನೆಯನ್ನು ಕಾರ್ಯಕರ್ತರು ಮನೆ, ಮನೆಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬಿಜೆಪಿಯಲ್ಲಿ ಅಭ್ಯರ್ಥಿ ಯಾರು? : ಬಿಜೆಪಿಯಲ್ಲಿ ಅಭ್ಯರ್ಥಿಯ ಆಯ್ಕೆ ವರಿಷ್ಠರಿಗೆ ಕಗ್ಗಂಟಾಗಿದೆ. ಇದುವರೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರವಾಗದಿರುವುದರಿಂದ ಕಾರ್ಯಕರ್ತರಲ್ಲಿ
ಗೊಂದಲ, ಕುತೂಹಲಗಳು ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟಿ.ವಿಗಳಲ್ಲಿ ದಿನಕ್ಕೊಬ್ಬರ ಹೆಸರು ಬರುತ್ತಿದೆ. ಪ್ರಥಮವಾಗಿ ಗಂಗಾಧರ ಗೌಡರ ಹೆಸರು ಬಂದರೆ, ಈಗ ಹರೀಶ್ ಪೂಂಜರ ಹೆಸರು ಬರುತ್ತಿದೆ. ಇದರಿಂದಾಗಿ ಕಾರ್ಯಕರ್ತರಲ್ಲಿ ನಿರಂತರ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲೂ ಬಿಸಿ, ಬಿಸಿ ಚರ್ಚೆ ವಾದಗಳಿಗೆ ಕಾರಣವಾಗಿದೆ. ಪ್ರತಿಯೊಬ್ಬರ ಬೆಂಬಲಿಗರು ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಪ್ರಚಾರವನ್ನು ನಡೆಸಿ, ಅವರಿಗೇ ಟಿಕೇಟು ನೀಡಬೇಕು ಎಂಬ ಒತ್ತಾಯವನ್ನು ಮಾಡಿ ವರಿಷ್ಠರ ಮೇಲೆ ಒತ್ತಡವನ್ನು ತರುತ್ತಿದ್ದಾರೆ.
ಇತ್ತೀಚೆಗೆ ಪಕ್ಷದ ವರಿಷ್ಠರು ಬೆಳ್ತಂಗಡಿ ಕ್ಷೇತ್ರದ ಬಿಜೆಪಿಯ ನಾಯಕರನ್ನು ಬೆಂಗಳೂರಿಗೆ ಕರೆಸಿಕೊಂಡು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪಕ್ಷದ ಅಧ್ಯಕ್ಷ ರಂಜನ್ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಗಂಗಾಧರ ಗೌಡ, ಹರೀಶ್ ಪೂಂಜ, ಪ್ರಸಾದ್ ಕುಮಾರ್, ಬಾಲಕೃಷ್ಣ ಶೆಟ್ಟಿ, ಜಯಂತ ಕೋಟ್ಯಾನ್, ಮಮತಾ ಶೆಟ್ಟಿ, ಸೌಮ್ಯಲತಾ, ಪ್ರಭಾಕರ ಶೆಟ್ಟಿ, ಸೀತಾರಾಮ ಸೇರಿದಂತೆ ಬಿಜೆಪಿಯ ಪ್ರಮುಖರು ತಮ್ಮ ಅಭಿಪ್ರಾಯವನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಇದೀಗ ಬಿಜೆಪಿಯಲ್ಲಿ ಹರೀಶ್ ಪೂಂಜ, ಗಂಗಾಧರ ಗೌಡ, ರಂಜನ್ ಗೌಡ, ಕೇಶವ ಬಂಗೇರರ ಹೆಸರು ವರಿಷ್ಠರ ಮುಂದಿದೆ. ಅಭ್ಯರ್ಥಿತನಕ್ಕಾಗಿ ಹರೀಶ್ ಪೂಂಜ ಮತ್ತು ಗಂಗಾಧರ ಗೌಡರ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ. ಆಕಾಂಕ್ಷಿಗಳು ದೆಹಲಿ, ಬೆಂಗಳೂರಿಗೆ ತೆರಳಿ ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿಜೆಪಿಯಲ್ಲಿ ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಗಾಗಿ ಆಂತರಿಕವಾಗಿ ಸಮೀಕ್ಷೆ ನಡೆದಿದೆ. ಪಕ್ಷದ ವರಿಷ್ಠರು ಯಾರನ್ನು ಅಭ್ಯರ್ಥಿಯಾಗಿ ಘೋಷಿಸಬಹುದು ಎಂಬುದು ಎ.15ರ ನಂತರ ಗೊತ್ತಾಗಲಿದೆ. ಅಷ್ಟರವರೆಗೆ ಕುತೂಹಲ ಮುಂದುವರಿಯಲಿದೆ.
ಜೆಡಿಎಸ್ ವೇದಿಕೆ ಸಜ್ಜು
ಜೆಡಿಎಸ್ ಮತ್ತು ಬಿಎಸ್‌ಪಿ ಹೊಂದಾಣಿಕೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ವೇದಿಕೆ ಸಜ್ಜುಗೊಂಡಿದೆ. ಈ ಪಕ್ಷದಿಂದ ತಾಲೂಕು ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಅಡ್ಕಾಡಿ ಜಗನ್ನಾಥ ಗೌಡ, ಸುಮತಿ ಹೆಗ್ಡೆ ಹಾಗೂ ಸುಳ್ಯದ ಎಂ.ಬಿ. ಸದಾಶಿವ ಅವರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಇವರಲ್ಲಿ ಸುಳ್ಯದ ಎಂ.ಬಿ. ಸದಾಶಿವ ಅವರನ್ನು ಬೆಳ್ತಂಗಡಿ ಕ್ಷೇತ್ರದಲ್ಲಿ ನಿಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎನ್ನಲಾಗುತ್ತಿದೆ. ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಹಿಂದೆ ಸ್ಪರ್ಧೆ ಮಾಡಿದ್ದ ಎಸ್.ಡಿ.ಪಿ.ಐ. ಈ ಬಾರಿಯೂ ತಾಲೂಕಿನಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಸಿಪಿಐ(ಎಂ)ನಲ್ಲಿ ಅಂತರಿಕ ಕಚ್ಚಾಟ ಮುಂದುವರಿದಿದ್ದು, ಈ ಬಾರಿ ಸ್ಪರ್ಧಿಸುವ ಸಾಧ್ಯತೆಗಳಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.