ಶ್ರೀ ಗುರು ಮಿತ್ರ ಸಮೂಹ ದಶಮಾನೋತ್ಸವ ಅಂಗವಾಗಿ ಅಂತರ್‌ಯುವ ಮಂಡಲಗಳ ಕ್ರೀಡಾಕೂಟ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

 ಬೆಳ್ತಂಗಡಿ : ನೆಹರು ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಶ್ರೀ ಗುರು ಮಿತ್ರ ಸಮೂಹ ಇದರ ದಶಮಾನೋತ್ಸವ ಶ್ರೀ ಗುರುದಶಪರ್ವಂ ಅಂಗವಾಗಿ ಅಂತರ್ ಯುವ ಮಂಡಲಗಳ ಕ್ರೀಡಾಕೂಟ ಎ.7 ರಂದು ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.
ಕ್ರೀಡಾ ಕೂಟವನ್ನು ಅಂತರ್ ರಾಷ್ಟ್ರೀಯ ನೆಟ್‌ಬಾಲ್ ಆಟಗಾರ ನಿತಿನ್ ಪೂಜಾರಿ ಉದ್ಘಾಟಿಸಿ ಮಾತನಾಡುತ್ತಾ ಇಂತಹ ಸ್ಫರ್ಧೆಗಳ ಮೂಲಕ ಕ್ರೀಡಾ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಅದರಂತೆ ಇದು ಇಲ್ಲಿಗೆ ಸೀಮಿತವಾಗಿರದೆ ಅಂತರಾಷ್ಟ್ರೀಯ ಸ್ಫರ್ದೆಗಳಲ್ಲಿ ಮಿಂಚಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ ಜಿಲ್ಲಾ ಯುವ ಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲಿಯಾನ್ ಮಾತನಾಡಿ ಶ್ರೀ ಗುರು ಮಿತ್ರ ಸಮೂಹ ಕೇವಲ 10 ವರ್ಷಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದೆ ಎಂದರು. ಜೆಸಿಐ ಮಂಜುಶ್ರೀ ಮಾಜಿ ಅಧ್ಯಕ್ಷ ವಲಯ 15 ರ ಉದಕ ಸಂಪಾದಕ ವಸಂತ ಶೆಟ್ಟಿ ಶ್ರದ್ಧಾ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನೆಟ್‌ಬಾಲ್ ಅಂತರಾಷ್ಟ್ರೀಯ ಆಟಗಾರ ನಿತಿನ್ ಪೂಜಾರಿ ಯವರನ್ನು ಸನ್ಮಾನಿಸಲಾಯಿತು. ಹಾಗೂ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು, ಶ್ರೀ ಗುರು ಮಿತ್ರ ಸಮೂಹದ ಮಾಜಿ ಅಧ್ಯಕ್ಷ ಚಿದಾನಂದ ಇಡ್ಯ ಪ್ರತಿಜ್ಞಾ ವಿಧಿ ಭೋದಿಸಿದರು. ಪೂರ್ವಾಧ್ಯಕ್ಷೆ ಶ್ರೀಮತಿ ಸುಜಾತ ಎ.ಪೂಜಾರಿ, ಸ್ಥಾಪಕ ಅಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಮಿತ್ರ ಸಮೂಹದ ಅಧ್ಯಕ್ಷ ಸ್ಮಿತೇಶ್ ಎಸ್. ಬಾರ್ಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಸಮರ್ಥನ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ಕಾಮಿಡಿ ಕಿಲಾಡಿ ಅನಿಶ್ ಅಮಿನ್ ಸ್ವಾಗತಿಸಿ, ನೆಹರೂ ಯುವ ಕೇಂದ್ರದ ಪ್ರತಿನಿಧಿ ಸಾಂತಪ್ಪ ವಂದಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಅಥ್ಲೆಟಿಕ್ಸ್ ಹಾಗೂ ವಿವಿಧ ಸ್ಫರ್ಧೆಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.