ಮೂವರ ಪ್ರಾಣ ಉಳಿಸಿದ ಕೊಕ್ಕಡ ಯುವಕರು: ಜಿಲ್ಲಾ ಎಸ್ಪಿಯವರಿಂದ ಪ್ರಶಂಸೆ.

 ಕೊಕ್ಕಡ: ಎ.  4 ರಂದು ಬೆಂಗಳೂರು ಮೂಲದ ಮಹಿಳೆ ಮತ್ತು ಮಕ್ಕಳಿಬ್ಬರು  ಆತ್ಮಹತ್ಯೆ ಗೈಯಲು ಬಂದಿರುವುದನ್ನು ತಿಳಿದು ಈ ಮೂವರನ್ನು ಪೋಲಿಸ್ ಇಲಾಖಾಧಿಕಾರಿಗಳಿಗೆ ತಿಳಿಸಿ ರಕ್ಷಿಸಿದ ಕಾರಣಕ್ಕಾಗಿ ಕೊಕ್ಕಡದ ಬೋಳದ ಬೈಲು ರಫೀಕ್ ಮತ್ತು ಅಜೀಜ್ ಎಂಬ ಇಬ್ಬರು ಯುವಕರಿಗೆ ದ.ಕ. ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡರವರು ಎಪ್ರಿಲ್ 7 ರಂದು ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು.                                                                           ಎ.4 ರಂದು ಬೆಂಗಳೂರಿನ ರಾಮನಗರ ಮೂಲದ ಚಂದ್ರಕಲಾ ತನ್ನ ಇಬ್ಬರು ಹೆಣ್ಣು ಮಕ್ಕಳ  ಜೊತೆ  ಬೆಂಗಳೂರಿನಿಂದ  ಧರ್ಮಸ್ಥಳಕ್ಕೆ ಬಸ್ಸಿನಲ್ಲಿ ಬರುವ ಸಂದರ್ಭದಲ್ಲಿ  ಅವರು ತಮ್ಮಮನೆಯಲ್ಲಿ ಪತಿಯ ಹೆತ್ತವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಗೈಯುವ ನಿರ್ಧಾರವನ್ನು ಮಾಡಿ ಬಂದಿರುವುದನ್ನು  ಅರಿತ ಅದೇ ಬಸ್ಸಿನ ಪಕ್ಕದ ಸೀಟಿನಲ್ಲಿದ್ದ ಕೊಕ್ಕಡದ ಇಬ್ಬರು ಯುವಕರು , ಸಮಯಾವಧಾನತೆಯಿಂದ ಈ ಮಹಿಳೆಯನ್ನು ಸಂತೈಸಿದ್ದಲ್ಲದೆ, ಕೊಕ್ಕಡದ ವಿಜಯಕರ್ನಾಟಕ ವರದಿಗಾರರ ಮೂಲಕ ಎಸ್ಪಿ ಯವರಿಗೆ ವಿಷಯ ತಿಳಿಸಿದ್ದರು. ಬಸ್ಸು ಧರ್ಮಸ್ಥಳ ತಲುಪುತ್ತಿದ್ದಂತೆ ಎಸ್ಪಿಯವರ ಆದೇಶದಂತೆ ಧರ್ಮಸ್ಥಳ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಅವಿನಾಶ್ ರವರು ಈ ಮೂವರನ್ನು ಪೋಲೀಸ್ ಜೀಪಲ್ಲಿ ಕುಳ್ಳಿರಿಸಿ ಠಾಣೆಗೆ ಕರೆಸಿ ಮಹಿಳೆಯ ಪತಿಯನ್ನು ಮರುದಿನ ಕರೆಸಿ ಸಾಂತ್ವನ ಹೇಳಿ ಪತಿಯೊಂದಿಗೆ ಕಳುಹಿಸಲಾಗಿತ್ತು. ಯುವಕರ ಪ್ರಸಂಗಾವಧಾನತೆಯಿಂದ ಈ ಮೂವರ ಪ್ರಾಣವುಳಿಸಿದ್ದಕ್ಕಾಗಿ ಈ ಕೊಕ್ಕಡದ ಯುವಕರನ್ನು ಜಿಲ್ಲಾ ಎಸ್ಪಿ ಯವರು ಇಲಾಖಾವತಿಯಿಂದ ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.