ಪುತ್ತಿಲ: ಪುತ್ತಿಲ ಗ್ರಾಮದ ಮಹಿಳೆಯಿಂದ 5000 ರೂ ಲಂಚ ಸ್ವಿಕರಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ ರವರನ್ನು ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಗಾಡಿ ಇವರ ದೂರಿನ ಮೇರೆಗೆ 94c ಯ ಅರ್ಜಿ ವಿಲೇವಾರಿಗೆ ಸಂಬಂದಪಟ್ಟಂತೆ ಗ್ರಾಮದ ಮಹಿಳೆಯಿಂದ ಈಗಾಗಲೇ ರೂ. 3000/- ಲಂಚ ಪಡೆದು ಕಳೆದ ಒಂದುವರೆ ವರ್ಷಗಳಿಂದ ಮತ್ತೆ ರೂ. 5000/- ಪೀಡಿಸುತ್ತಿದ್ದರು. ದಾಳಿ ಸಂದರ್ಭದಲ್ಲಿ ಎಸ್ಪಿ ಶೃತಿ ಎನ್.ಎಸ್, ಡಿವೈಎಸ್ಪಿ ಸುಧೀರ್ ಹೆಗ್ಡೆ, ಹಾಗೂ ಸರ್ಕಲ್ ಇನ್ಪೇಕ್ಟರ್ ಮೋಹನ್ ಕೊಟ್ಟಾರಿ ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್, ಉಮೇಶ, ರಾಧಾಕೃಷ್ಣ .ಕೆ ಹಾಗೂ ರಾಧಾಕೃಷ್ಣ ಡಿ.ಎ, ಪ್ರಶಾಂತ್, ವೈಶಾಲಿ, ರಾಜೇಶ್, ರಾಕೇಶ್, ಗಣೇಶ್, ಸಿಬ್ಬಂದಿಗಳು ಹಾಜರಿದ್ದರು.