ತಾಲೂಕಿನಲ್ಲಿ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಮಳೆ ಮರ ಬಿದ್ದು ಸಂಚಾರ ತಡೆ, ವಿದ್ಯುತ್ ಕಂಬಗಳು, ಕೃಷಿ ಹಾನಿ

ಬೆಳ್ತಂಗಡಿ: ತಾಲೂಕಿನ ಉಜಿರೆ ಧರ್ಮಸ್ಥಳ, ತೆಕ್ಕಾರು ಬಾರ್ಯಗಳಲ್ಲಿ ಎ.3 ರಂದು ಸಂಜೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಉಜಿರೆ ರ್ಮಸ್ಥಳ ಮಾರ್ಗದ ನೀರಚಿಲುಮೆ ಎಂಬಲ್ಲಿ ಮರ ಮುರಿದು ಬಿದ್ದು ಲಾರಿ ಜಖಂಗೊಂಡಿದೆ. ವಿದ್ಯುತ್ ಕಂಬಗಳು ಹಾನಿಯಾಗಿರುತ್ತದೆ. ಇದರಿಂದಾಗಿ ವಾಹನಗಳು ರಸ್ತೆಯಲ್ಲೆ ಸಾಲುಗಟ್ಟಿ ನಿಲ್ಲುವಂತಾಯಿತು. ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ನಾಗರಿಕರು ಉಜಿರೆ ಉಪವಲಯ ಅರಣ್ಯಾಧಿಕಾರಿ ವಿನೋದ್ ಗೌಡ, ಅರಣ್ಯ ರಕ್ಷಕರಾದ ಶರತ್ ಶೆಟ್ಟಿ, ಶಂಕರ ಶೆಟ್ಟಿ, ಅರಣ್ಯ ವೀಕ್ಷಕ ಸದಾನಂದ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಗ್ರಾ.ಪಂ ಸದಸ್ಯ ರವಿಕುಮಾರ್ ಬರೆಮೇಲು, ಸ್ಥಳೀಯ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ ಬಳಿಕ ವಾಹನಗಳು ಸಂಚರಿಸಿದವು.
ತೆಕ್ಕಾರು: ತೆಕ್ಕಾರು ಗ್ರಾಮದ ಹೊಸ ಮೊಗ್ರು ಎಂಬಲ್ಲಿ ಬಿಸಿದ ಬಾರಿ ಬಿರುಗಾಳಿ ಮಳೆಗೆ ಅಡಿಕೆ ಮರ, ರಬ್ಬರ್ ಗಿಡ, ತೆಂಗಿನ ಮರಗಳು ಹಾನಿಯಾಗಿರುತ್ತದೆ. ಕೆಲವು ಕಡೆ ಮನೆಯ ಮಾಡು ಹಾರಿಹೋಗಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಅಪಾರ ನಷ್ಟ ಉಂಟಾಗಿರುತ್ತದೆ.
ಹೊಸಮೊಗ್ರು ಪರಿಸರದಲ್ಲಿ ಬಿರುಗಾಳಿಗೆ ಅಬ್ದುಲ್ ರಹಿಮಾನ್ ಎಂಬವರ ತೋಟದಲ್ಲಿ ೫೦೦ ಅಡಿಕೆ ಮರ, 100 ರಬ್ಬರ್ ಗಿಡ, 8 ತೆಂಗಿನ ಮರ ಹಾಗೂ 2 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಚಿಂಗಾಣಿಗುಡ್ಡೆ ಎಂಬಲ್ಲಿ ಅಬ್ದುಲ್ ರಫಿಕ್ ಎಂಬವರ ತೋಟದ 250  ಅಡಿಕೆ ಮರ, 10 ತೆಂಗಿನಮರ, 125 ರಬ್ಬರ್ ಗಿಡಗಳು, ದಾವೂದ್ ಎಂಬವರಿಗೆ ಸೇರಿದ 125 ಅಡಿಕೆ ಮರ, ಇಬ್ರಾಹಿಂ ಎಂಬವರ 100 ಅಡಿಕೆ ಮರ, 3 ತೆಂಗಿನ ಮರ ಉರುಳಿ ಬಿದ್ದಿವೆ. ಪುತ್ತು ಬ್ಯಾರಿ ಎಂಬವರ ಮನೆ ಹಂಚು ಮತ್ತು ಶೀಟು ಹಾರಿ ಹೋಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.