ಎ.14 ಬೆದ್ರಬೆಟ್ಟು ಮರಿಯಾಂಬಿಕ ನೂತನ ದೇವಾಲಯ ಉದ್ಘಾಟನೆ

Advt_NewsUnder_1
Advt_NewsUnder_1

 ಬಂಗಾಡಿ : 1984 ರಲ್ಲಿ ಪ್ರಾರಂಭಗೊಂಡಿರುವ ಮರಿಯಾಂಬಿಕ ದೇವಾಲಯವು ಅಂದಿನ ತಲಶ್ಯೇರಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷರಾದ ಸೆಬ್ಯಾಸ್ಟಿನ್ ವಳ್ಳೊಪಳ್ಳಿಯವರಿಂದ ಪ್ರಾರಂಭಗೊಂಡು ಪ್ರಥಮ ಧರ್ಮಗುರುಗಳಾಗಿ ವಂ.ಫಾ ಲಾರೆನ್ಸ್ ಡಿಸೋಜರವರ ಮಾರ್ಗ ದರ್ಶನದಲ್ಲಿ ಬೆಳೆದು ನಿಂತಿತು. 34 ವರ್ಷಗಳ ಹಿಂದೆ 40 ಕುಟುಂಬದಿಂದ ಪ್ರಾರಂಭಗೊಂಡ ಚರ್ಚ್ ಇದೀಗ 125 ಕುಟುಂಬಗಳನ್ನು ಹೊಂದಿದ್ದು ೪೫ ಕುಟುಂಬಗಳು ನಾವೂರು ಬಾಲಯೇಸು ಚರ್ಚ್‌ಗೆ ವರ್ಗಾವಣೆಗೊಂಡಿದೆ. ಇಲ್ಲಿ ವಂ.ಫಾ| ಮುಂಡಕ್ಕ್‌ಲ್ ವಂ.ಫಾ| ವಲಿಯ ಪರಂಬಿಲ್, ವಂ.ಫಾ ಮಾಣಿ ವೆಳುತ್ತೆಡಲ್ತ್ ಪರಯಿಲ್, ವಂ| ಪಾ| ಟೋಮ್ ಚಿರುಕರ, ವಂ| ಫಾ| ಅಬ್ರಾಹಂ ಪಟ್ಟೇರಿಲ್, ವಂ.ಫಾ| ವರ್ಗಿಸ್ ಪುದಿಯೇಡಲ್ತ್, ವಂ.ಫಾ| ಸಿಬಿ ಪನಚ್ಚಿಕ್ಕಲ್, ವಂ.ಫಾ| ಬಿನೋಯಿ ಇಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಧರ್ಮಗುರು ವಂ.ಫಾ| ಶಾಜಿ ಮ್ಯಾಥ್ಯು ಚರ್ಚ್‌ನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಪ್ರಸ್ತುತ ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯು ಕಾರ್ಯಾಚರಿಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
34 ವರ್ಷಗಳ ಹಳೇಯದಾದ ಚರ್ಚ್‌ನ ಜೀರ್ಣೋದ್ಧಾರ ಮತ್ತು ನೂತನ ದೇವಾಲಯದ ಶಿಲಾನ್ಯಾಸವು 2015 ರಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಬಿಷಪ್ ಲಾರೆನ್ಸ್ ಮುಕುಯಿ ನೆರವೇರಿಸಿ ಇದೇ ಬರುವ ಎ.14 ರಂದು ನೂತನ ದೇವಾಲಯದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.