ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಸಿರಿ ಜಾತ್ರಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1

  ಕಾಣದ ದೇವರನ್ನು ನೋಡುವ ಮೊದಲು ಕಣ್ಣೆದುರು ಇರುವ ದೇವರನ್ನು ಪ್ರೀತಿಸಿ : ಮಾಣಿಲ ಶ್ರೀ

ಕ್ಷೇತ್ರದಲ್ಲಿ ಸತ್ಯದ ಸಿರಿ ಶಕ್ತಿ ಗ್ರಂಥ

ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಕ್ಷೇತ್ರಕ್ಕೆ ಬಹಳ ಇತಿಹಾಸವಿದೆ ಹಾಗೂ ಮಹಿಮೆಯಿದೆ. ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮಹಾ ತಪಸ್ವಿ ಸಿರಿಗೆ ಆದೇಶ ಹಾಗೂ ಶಕ್ತಿ ಕೊಟ್ಟ ಈ ಮಣ್ಣಿನಲ್ಲಿ ಸತ್ಯನಾಸಿರಿ ಮೂಲ ಗ್ರಂಥ ಇದೆ. ದೊಡ್ಡ ಶಕ್ತಿಯೊಂದಿದ ಗ್ರಂಥ ಯಾರ ಮನೆಯಲ್ಲಿರುವ ಗ್ರಂಥವಲ್ಲಾ, ಎಲ್ಲಿಯಾದರು ಯಾರದೋ ಮನೆಯಲ್ಲಿದ್ದರೇ ಆ ಮನೆಯಲ್ಲಿ ಮಾನಸಿಕ ದೌರ್ಬಲ್ಯ ಜಾಸ್ತಿಯಾಗಬಹುದು. ಮುಂದಿನ ದಿನಗಳಲ್ಲಿ ಗ್ರಂಥ ಸಿಗುತ್ತದೆ ಪ್ರಶ್ನೆಯಲ್ಲಿ ಉತ್ತರ ಸಿಗಬಹುದು.
– ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಕ್ಷೇತ್ರ.

ನಿಡಿಗಲ್ : ದೇವಸ್ಥಾನದಲ್ಲಿ ಪಕ್ಷ, ರಾಜಕೀಯ, ಜಾತಿ ಬೇಡ, ಜಾತಿ-ನೀತಿಗಳ ಕಟ್ಟುಪಾಡಿನೊಂದಿಗೆ ಮನುಷ್ಯತ್ವದ ನೆಲೆಯನ್ನು ಅರ್ಥಮಾಡಿ ಸದ್ಗುಣ ಶೀಲತೆಯ ಗುಣವನ್ನು ಮಾಡುವ ಕೆಲಸ ಸಮಾಜದ ಮುಂದಿದೆ. ಋಣಾತ್ಮಕ ದೌರ್ಬಲ್ಯವನ್ನು ಕಡಿಮೆ ಮಾಡಿ ಧನಾತ್ಮಕ ಪ್ರಕ್ರಿಯೆಗಳು ಮಾಡುವ ಜವಾಬ್ದಾರಿ ಸಮಾಜದಲ್ಲಿದೆ. ಇದನ್ನು ಅರ್ಥಮಾಡಿ ನೆರಮನೆಯವರನ್ನು ದೂರುವ ಬದಲು ಅವರನ್ನು ಪ್ರೀತಿಸೋಣ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನವನ್ನು ಕಟ್ಟಿದರೆ ಭಗವಂತನ ಅನುಗ್ರಹವಿದೆ. ಕಾಣದ ದೇವರನ್ನು ನೋಡುವ ಮುನ್ನ ಕಾಣುವ ದೇವರನ್ನು ಪ್ರೀತಿಸಿ, ಗೌರವಿಸಿ, ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು, ಈ ಮಣ್ಣಿನ ಸತ್ವವನ್ನು ಉಳಿಸುವ ಅನ್ನದಾತ ರೈತ, ದೇಶದ ಭದ್ರತೆಯನ್ನು ಕಾಪಾಡುವ ಯೋಧರೂ, ಕಷ್ಟ ಕಾಲದಲ್ಲಿ ಸಹಕಾರ ನೀಡಿದವರು ಕಣ್ಣಿಗೆ ಕಾಣುವ ದೇವರು, ಇವರಿಗೆ ಕೃತಜ್ಞತೆ ಸಲ್ಲಿಸೋಣ, ಇವರನ್ನು ಪ್ರೀತಿಸೋಣ ಎಂದು ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾ. ೩೧ ರಂದು ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್‌ನ ವರ್ಷಾವಧಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಅಧರ್ಮ ಜಾಸ್ತಿಯಾಗಿ ಅನ್ಯಾಯ ನಡೆದಾಗ ಅದನ್ನು ಎಚ್ಚರಗೊಳಿಸುವ ಮಹಾನ್ ಶಕ್ತಿ ಸಿರಿ, ಸಿರಿ ನರ್ತನ ಸೇವೆ ಜೀವನದ ಬದ್ಧತೆಗೆ ಕೊಟ್ಟ, ಆತ್ಮಸ್ಥೆರ್ಯ ಕೊಡುವಂತಹ ಜನ ಸಾಮಾನ್ಯರ ಬದುಕಿಗೂ ಅಂತರ್ಗತವಾದ ಆತ್ಮಕ್ಕೂ ಆಧ್ಯಾತ್ಮಕ ಶಕ್ತಿಗೆ ನೆಲೆ ಇದೆ ಎಂಬುದನ್ನು ತೋರಿಸುವ ಪ್ರಮೇಯ, ಹಾಗೂ ಭಾವನಾತ್ಮಕವಾದ ಪ್ರತಿಕ್ರಿಯೇ ಆರಾಧನೆ ಎಂದರು.
ನಂಬಿಕೆಯೇ ನಮ್ಮ ಮೂಲ ಸತ್ವ -ಪ್ರಕಾಶ್ ಶೆಟ್ಟಿ, ನೊಚ್ಚ: ನಂಬಿಕೆಯ ಮೇಲೆ ದೇಶ ನಿಂತಿದೆ. ಇವತ್ತು ಜಾತಿ, ಮತ, ಭೇದ ಬಿಟ್ಟು ಎಲ್ಲಾ ಧರ್ಮ ಒಂದೇ ಎನ್ನುವ ಭಾವನೆಯಿಂದ ಬದುಕುವ, ಜೀವನದಲ್ಲಿ ಜಂಜಾಟ ಬಿಟ್ಟು ದೇವರು ಎಂಬ ಶಕ್ತಿಯ ಮೇಲೆ ನಂಬಿಕೆ ಬೇಕು. ಅದು ಅಪನಂಬಿಕೆ-ಮೂಡನಂಬಿಕೆ ನಮಗೆ ಬೇಡ, ಸುಸಂಸ್ಕೃತವಾದ ದೇಶದಲ್ಲಿ ನಾವು ಹುಟ್ಟಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೈವ-ದೇವಸ್ಥಾನ, ಮಠ, ಮಂದಿರ, ಚರ್ಚ್, ಮಸೀದಿಗಳು ಇದೆ. ಭಕ್ತರು ತನ್ನ ಆಸೆ-ಆಕಾಂಕ್ಷೆಗಳನ್ನು ದೇವರು ಎಂಬ ನಂಬಿಕೆಯ ಮೇಲೆ ಈಡೇರಿಸುತ್ತಾರೆ. ಪರಶುರಾಮನ ಸೃಷ್ಟಿಯ ಈ ತುಳುನಾಡು ಪುಣ್ಯಭೂವಿ, ದೈವ-ದೇವರ ಆರಾಧನೆಯೊಂದಿಗೆ ನಾಗರಾಜನಿಗೆ ತಂಬಿಲ ನೀಡುತ್ತಾ ಹಿರಿಯರು ಹಾಕಿದ ಸಂಸ್ಕ್ರತಿಯನ್ನು ಉಳಿಸುವಲ್ಲಿ ನಾವೆಲ್ಲರೂ ಬದ್ಧರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ವಹಿಸಿ ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ್ದರು. ಈ ಸಂದರ್ಭದಲ್ಲಿ ಭಕ್ತಿ ಗೀತೆಯ ಸಾಹಿತ್ಯ ರಚಿಸಿದ ಶಿವು ನಾರಾವಿ ಹಾಗೂ ರಂಗಭೂಮಿಯ ಕಲಾವಿದ ರವಿಚಂದ್ರ ಬಿ. ಸಾಲಿಯಾನ್‌ರವರನ್ನು ಗೌರವಿಸ ಲಾಯಿತು. ವೇದಿಕೆಯಲ್ಲಿ ನರಸಿಂಹ ಸೋಮಯಾಜಿ, ವ್ಯವಸ್ಥಾಪನ ಸದಸ್ಯರಾದ ನವೀನ್ ಶೆಟ್ಟಿ ಗುತ್ತಿಲಾರಬೆಟ್ಟು, ಯಶೋಧರ ಗೌಡ ಕೊಡ್ಡೋಲು, ಗಿರಿಯಪ್ಪ ಪೂಜಾರಿ ಬ್ರಹ್ಮಸ, ಸುಶೀಲ ನಾಕ, ಮಮತಾ ಸುಭಾಷ್ ಉಪಸ್ಥಿತರಿದ್ದರು. ಚಿತ್ರಾಕ್ಷಿ ಪ್ರಾರ್ಥನೆ ಹಾಡಿ ಸಮಿತಿ ಸದಸ್ಯ ಪ್ರವೀಣ್ ವಿ. ಜಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ಅನುರಾಧ ಮತ್ತು ಭವ್ಯಾ ಕಾರ್ಯಕ್ರಮ ನಿರೂಪಿಸಿ, ಬೇಬಿ ಉಮೇಶ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.