ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ನಕಲಿ ಅಂಕಪಟ್ಟಿ ನೀಡಿ ವಂಚನೆ ಆರೋಪ: ಮೂವರ ಮೇಲೆ ಕೇಸು

Advt_NewsUnder_1
Advt_NewsUnder_1
Advt_NewsUnder_1

  ಕಾಲೇಜು ವ್ಯವಹಾರಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಕಾಲೇಜಿನ ಆಡಳಿತಕ್ಕೊಳಪಟ್ಟ ವಿಚಾರ. ಆ ಸಂಸ್ಥೆಯಲ್ಲಿ ದಾಖಲೆ ಪ್ರಕಾರ ನಾನು ಏನೂ ಅಲ್ಲ. ಆದರೂ ನನ್ನ ಮೇಲೂ ಪ್ರಕರಣ ದಾಖಲಿಸಿದ್ದಾರೆ.
-ಅಶ್ರಫ್ ಆಲಿಕುಂಞಿ

ಬೆಳ್ತಂಗಡಿ: ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜ್‌ನಲ್ಲಿ ಎಂ.ಬಿ.ಎ ಶಿಕ್ಷಣ ನೀಡುವ ನೆಪದಲ್ಲಿ ಅಧಿಕ ಹಣವನ್ನು ಪಡೆದು ನಕಲಿ ಸರ್ಟೀಫಿಕೇಟ್ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಸವಣಾಲು ಗ್ರಾಮದ ಕಪ್ರೊಟ್ಟು ನಿವಾಸಿ ಸುಮಲತಾ ಎಂಬವರು ಮಾ.೨೯ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮುಖ್ಯಸ್ಥ ಹಾಗೂ ಪ್ರಾಂಶುಪಾಲ ತಲ್‌ಹತ್, ಕೋ-ಆರ್ಡಿನೇಟರ್ ಮುನಿರಾ ಕೆ., ಹಾಗೂ ಸಲಹೆಗಾರ ಆಶ್ರಫ್ ಆಲಿ ಇವರ ವಿರುದ್ಧ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿಯ ಕ್ಯಾಂಪ್ಕೋ ರಸ್ತೆ ಬಳಿಯ ಕಟ್ಟಡದಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ರಾಜ್ಯ ಸರಕಾರದ ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯದಲ್ಲಿ ಜ್ಞಾಪನಾಪತ್ರವನ್ನು ಪಡೆದುಕೊಂಡಿದ್ದು, ಮುಂಬೈಯ ಇಂಡಿಯನ್ ಟೆಕ್ನಿಕಲ್ ಎಜ್ಯುಕೇಶನ್ ಸೊಸೈಟಿಯಲ್ಲಿ 2015 ರಿಂದ 2019 ರವರೆಗೆ ನೋಂದಾವಣೆಯನ್ನು ಪಡೆದುಕೊಂಡಿದೆ. ಮುಂಬೈಯ ಈ ಸಂಸ್ಥೆ ನಿರುದ್ಯೋಗಿ ಯುವಕ-ಯುವತಿಯರಿಗೆ ಫ್ಯಾಶನ್ ಡಿಸೈನ್, ಟೈಲರಿಂಗ್, ಆಟೋಮೊಬೈಲ್‌ನಂತಹ ವೃತ್ತಿ ತರಬೇತಿಗಳನ್ನು ನಡೆಸಿ, ಈ ಬಗ್ಗೆ ಸರ್ಟೀಫಿಕೇಟು ನೀಡುತ್ತಿದೆ.
ಸುಮಲತಾ ದೂರು: ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಸುಮಲತಾ ಅವರು 2014 ಜು.16 ರಂದು ಒಂದು ವರ್ಷದ ಫ್ಯಾಶನ್ ಡಿಸೈನ್‌ಗೆ ಪ್ರವೇಶಾತಿ ಪಡೆದು ಕೋರ್ಸು ಪೂರ್ತಿಗೊಳಿಸಿದ್ದು, ಅದಕ್ಕೆ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ಈ ನಡುವೆ ಇದೇ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದಾಗ ಸಂಸ್ಥೆಯ ಮುಖ್ಯಸ್ಥರು ಎಂ.ಬಿ.ಎ ಕೋರ್ಸು ಮಾಡುವಂತೆ ಸೂಚಿಸಿದ ಮೇರೆಗೆ ತಾನು ಅದಕ್ಕೆ ರೂ.60 ಸಾವಿರ ಶುಲ್ಕ ಪಾವತಿಸಿ ಎಂ.ಬಿ.ಎ ಕೋರ್ಸು ಮಾಡಿದ್ದು, 2016 ರಲ್ಲಿ ಇದಕ್ಕೆ ಅಂಕಪಟ್ಟಿ ನೀಡಿದ್ದಾರೆ. ತಾನು ಖಾಸಗಿ ಕಾಲೇಜಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಅಲ್ಲಿ ಸರ್ಟೀಫಿಕೇಟನ್ನು ನೀಡಿದ್ದು, ಅಲ್ಲಿ ಪರಿಶೀಲನೆ ವೇಳೆ ಇದು ನಕಲಿ ಅಂಕಪಟ್ಟಿ ಎಂಬುದು ಬೆಳಕಿಗೆ ಬಂದಿತ್ತು ಎಂದು ಸುಮಲತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಅನುಗ್ರಹ ಸಂಸ್ಥೆಯವರು ನೀಡಿರುವ ಅಂಕಪಟ್ಟಿ ಯಾವುದೇ ಸರಕಾರದ ಮಾನ್ಯತೆ ಹೊಂದಿದ ಸಂಸ್ಥೆಯ ಅಂಕಪಟ್ಟಿಯಾಗಿರದೇ ಬೆಂಗಳೂರಿನ ಜೆ.ಪಿ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಬ್ಯುಸಿನೆಸ್ ಮ್ಯಾನೆಜ್ ಮೆಂಟ್ ಆಂಡ್ ಸ್ಟಡಿಸ್, ಇಂಡಿಯನ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಎಂಪ್ಲಾಯಿಮೆಂಟ್ ಆಂಡ್ ಟ್ರೈನಿಂಗ್ ಎಂಬ ಹೆಸರಿನ ಅಂಕಪಟ್ಟಿ ಯಾಗಿದೆ ಅಲ್ಲದೆ ಮುಂಬಯಿಯ ಇಂಡಿಯನ್ ಟೆಕ್ನಿಕಲ್ ಎಜುಕೇಶನಲ್ ಸೊಸೈಟಿ ಎಂಬ ಹೆಸರಿನಲ್ಲಿ ನೀಡಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಬೇಕು ಎಂದು ಅವರು ದೂರಿನಲ್ಲಿ
ಒತ್ತಾಯಿಸಿದ್ದಾರೆ. ದೂರನ್ನು ಸ್ವೀಕರಿಸಿ ತನಿಖೆ ನಡೆಸಿದ ಬೆಳ್ತಂಗಡಿ ಪೋಲಿಸರು ಸೆಕ್ಷನ್ 420 ರಂತೆ ಮೂವರ ಮೇಲೆ ಕೇಸು ದಾಖಲಿಸಿಕೊಂಡು ಮಾರ್ಕ್ ಕಾರ್ಡಿನ ಪರಿಶೀಲನೆಗೆ ಮುಂಬಯಿ ಸಂಸ್ಥೆಗೆ ಬರೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.