ಸನಾತನ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ : ವಜ್ರದೇಹಿ ಸ್ವಾಮೀಜಿ

 ಶಿಶಿಲ-ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ವರ್ಷಾವಧಿ ನೇಮೋತ್ಸವ

ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ
ಸಮಾಜದಲ್ಲಿ ಅಸಕ್ತರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಚಿಂತನೆ ಇರುವ ಸಂಸ್ಥೆಗಳಾದ ಅಮೃತ ಸಂಜೀವಿನಿ, ಯುವ ತೇಜಸ್ಸು, ವೀರಕೇಸರಿ ಬೆಳ್ತಂಗಡಿ, ಬಿರುವೆರ್ ಕುಡ್ಲ ಬೆಳ್ತಂಗಡಿ, ಶ್ರೀ ವೀರಾಂಜನೇಯ ಸೇವಾ ಸಮಿತಿ ಸಂಸ್ಥೆಗಳನ್ನು ಒಟ್ಲ ಕ್ಷೇತ್ರದ ವತಿಯಿಂದ ಗುರುತಿಸಿ ಗೌರವಿಸಲಾಯಿತು.

ಶಿಶಿಲ : ನಮ್ಮ ಹಿರಿಯರು ಆಚಾರಿಸಿಕೊಂಡು ಬಂದಂತಹ ಆರಾಧನ ಪದ್ಧತಿಯನ್ನು ಸಂಸ್ಕೃತಿಯನ್ನು ಆಸ್ತಿಕರಾದ ನಾವು ಬೆಳೆಸಬೇಕು ಎಂಬ ಶಿಷ್ಠಚಾರ ನಮ್ಮ ಹಿಂದೂ ಧರ್ಮದ ಒಳಗೆ ಇದೆ, ಒಟ್ಲ ಎಂಬ ಶಬ್ದದಲ್ಲಿ ಇಡೀ ಹಿಂದೂ ಸಮಾಜ ಒಗ್ಗಾಟ್ಟಗಬೇಕು ಎಂಬ ಭಾವನೆಯಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಎ. 1 ರಂದು ಒಟ್ಲ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹಿಂದೂ ಧರ್ಮವನ್ನು ಜಾಗೃತಿ ಮಾಡುವ ಒಟ್ಟಿಗೆ ದೈವ-ದೇವರ ಆರಾಧನೆಯ ಫಲ ಸಮಾಜಕ್ಕೆ ಪಟ್ಟುವ ಕೆಲಸ ಮಾಡಬೇಕು. ಇಂತಹ ಧರ್ಮ ಜಾಗೃತಿಯಲ್ಲಿ ಸರ್ವ ಹಿಂದೂ ಸಮಾಜದ ಬಂಧುಗಳು ಭಾಗಿಯಾಗಿ ನಮ್ಮ ಆಚಾರ-ವಿಚಾರ ಸಂಸ್ಕ್ರತಿಯನ್ನು ಉನ್ನತವಾಗಿ

ಕೊಂಡ್ಯೊಯುವ ಅವಶ್ಯಕತೆ ಇದೆ ಎಂದರು. ಅಧ್ಯಕ್ಷತೆಯನ್ನು ಕಂಕನಾಡಿ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ವಹಿಸಿ ಮಾತನಾಡಿ ಅನಾದಿ ಕಾಲದಿಂದಲೂ ರಾಜ ವೈಭವದಿಂದ ಮೆರೆದ ಈ ಕ್ಷೇತ್ರ ಕಳೆದ ಎರಡು-ಮೂರು ವರ್ಷ ಹಿಂದೆ ಜೀರ್ಣೋದ್ಧಾರಗೊಂಡು ಇಲ್ಲಿನ ಕಾರಣಿಕ ಶಕ್ತಿಯಿಂದ ತಾಲೂಕು-ಜಿಲ್ಲೆಯಲ್ಲಿಯೇ ಹೆಸರು ಪಡೆದಿದೆ. ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರು, ಶ್ರೀ ಧರ್ಮರಸು ಉಳ್ಳಾಕ್ಲು ನೆಲೆನಿಂತು ನಂಬಿದವರ ಪಾಲಿಗೆ ಬೆಳಕು ನೀಡಿದ ಉದಾಹರಣೆಗಳಿವೆ ಎಂದರು.
ನಾರಾವಿ ಕ್ಷೇತ್ರದ ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ ಬೆಳ್ತಂಗಡಿ ಪೇಟೆಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ ಅತ್ಯಂತ ಪವಿತ್ರಾತೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ವರ್ಷಾವಧಿ ಕಾರ್ಯಕ್ರಮ ಮಾಡುವುದರೊಂದಿಗೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಒಟ್ಲದ ಆನುವಂಶೀಯ ಧರ್ಮದರ್ಶಿ ಜನಾರ್ದನ ಬಂಗೇರ, ಸುವರ್ಣ ಸಾಂಸ್ಕ್ರತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಒಟ್ಲ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಪೂಜಾರಿ ಒಟ್ಲ, ಶಿಶಿಲ ಗ್ರಾ.ಪಂ ಸದಸ್ಯ ಸೂರಜ್ ನೆಲ್ಲಿಂತ್ತಾಯ, ಬಿರುವೆರ್ ಕುಡ್ಲದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಬ್ರಹ್ಮಕಲಶೋತ್ಸವ ಅಧ್ಯಕ್ಷ ಜಯರಾಮ ಪೂಜಾರಿ, ಶ್ರೀ ಕ್ಷೇತ್ರ ಒಟ್ಲದ ಉತ್ಸವ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ, ಆರ್ಚಕ ಚಿದಾನಂದ ಶಾಂತಿ, ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸೂರ್ಯನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿ, ಸುಗುಣಾ ಟೀಚರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.