HomePage_Banner_
HomePage_Banner_
HomePage_Banner_

ತಾಲೂಕಿನಲ್ಲಿಯೇ 2ನೇ ಅತೀ ದೊಡ್ಡ ರಸ್ತೆಗೆ ಅನುದಾನ ಪಡೆದ ಪಂಚಾಯತ್ ಕಾಶಿಪಟ್ಣ.

ರೂ.5.50 ಕೋಟಿ ವೆಚ್ಚದ ನಮ್ಮ ಗ್ರಾಮ ನಮ್ಮ ರಸ್ತೆ ಪ್ರಥಮ ಹಂತದ ಕಾಮಗಾರಿ ಉದ್ಘಾಟನೆ

ತಾಲೂಕಿನಲ್ಲಿ ಎಷ್ಟೇ ಅಭಿವೃದ್ಧಿಪಡಿಸಿದರೂ, ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಂದಿನ ದಿನಗಳಲ್ಲಿ ನೀವು ನನ್ನನ್ನು ಆಯ್ಕೆಮಾಡಿ ಕಳುಹಿಸಿದರೆ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುತ್ತೇನೆ.
-ಶಾಸಕ ಕೆ. ವಸಂತ ಬಂಗೇರ

ಕಾಶಿಪಟ್ಣ: ತಾಲೂಕಿನಲ್ಲಿಯೇ ರಸ್ತೆ ಅನುದಾನದಲ್ಲಿ ಅತೀ ದೊಡ್ಡ ಮೊತ್ತದ ಕಾಮಗಾರಿ ನಡೆದಿದ್ದು 2 ನೇ ಸ್ಥಾನ ಕಾಶಿಪಟ್ಣ ಪಡೆದುಕೊಂಡಿದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಮಾ. 25 ರಂದು ಕಾಶಿಪಟ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಶಿಪಟ್ಣ ಬಿಲ್ಲವ ಸಂಘದಿಂದ ಕೇಳದಪೇಟೆಯಾಗಿ ಆದಿಶಕ್ತಿ ದೇವಸ್ಥಾನದಿಂದ ಹತ್ಯಡ್ಕವರೆಗಿನ ಸಂಪರ್ಕ ರಸ್ತೆ ಹಾಗೂ 3 ಸೇತುವೆ ಸೇರಿದಂತೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 5.5 ಕಿ.ಮೀ. ರಸ್ತೆ ಸುಮಾರು ರೂ.5.50 ಕೋಟಿ ಅನುದಾನದ ಪ್ರಥಮ ಹಂತದ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. ಪ್ರಥಮ ಸ್ಥಾನ ರೂ.11 ಕೋಟಿ ಅನುದಾನ ನೆರಿಯ ಗ್ರಾ.ಪಂ. ಗೆ ಸಲ್ಲುತ್ತದೆ. ಕಳೆದ 4 ವರ್ಷ 10
ಕೋಟಿಗೂ ಮಿಕ್ಕಿದ ಅನುದಾನ ಕಾಶಿಪಟ್ಣ ಗ್ರಾಮಕ್ಕೆ ನೀಡಿದ್ದೇನೆ. ಇಲ್ಲಿಯ ಅಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಾರೆ. ಆದುದರಿಂದ ಇಷ್ಟು ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿಗೆ ಇನ್ನು 60 ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ. ಅದು ರಾತ್ರಿ ಹಗಲು ಎನ್ನದೇ ಚುನಾವಣೆಯ ಮೊದಲು ಪೂರ್ಣಗೊಳಿಸುವ ಜವಾಬ್ದಾರಿ ನನ್ನದು. ಯಾರಿಗೂ ತಾರತಮ್ಯ ಮಾಡದೆ ಅನುದಾನ ಒದಗಿಸಿಕೊಡಲಾಗಿದೆ. ಬಡವರಿಗೆ ಈಗಾಗಲೇ ಯುನಿವರ್ಸಲ್ ಆರೋಗ್ಯ ಕಾರ್ಡ್ ಲಭ್ಯವಿದೆ. ನೀರು, ಕರೆಂಟ್, ಶಾಲೆ, ಆರೋಗ್ಯ ಮುಂತಾದ ಎಲ್ಲಾ ಕ್ಷೇತ್ರದಲ್ಲಿಯು ತಾಲೂಕು ಅಭಿವೃದ್ಧಿ ಕಂಡಿದೆ. ನಮ್ಮ ಗ್ರಾಮ ನಮ್ಮ ರಸ್ತೆ ರಚನೆಯಾಗುವಲ್ಲಿ ಅನೇಕರು ಶ್ರಮ ಪಟ್ಟಿದ್ದಾರೆ. ತಮ್ಮ ಪಟ್ಟ ಜಾಗವನ್ನು ರಸ್ತೆಗೆ ನೀಡಿದ್ದರಿಂದ ಈ ರಸ್ತೆ ರಚನೆಯಾಗಿದೆ. ಸುಮಾರು 29  ಜನರು ಪಟ್ಟಾಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟವರನ್ನು ಶಾಸಕರು ಸನ್ಮಾನಿಸಿದರು. ತಾಲೂಕಿನ ಎಲ್ಲಾ ಪಂಚಾಯತ್ ಕೆಲಸ ಮಾಡಿದರೆ ಅಭಿವೃದ್ಧಿಯಾಗಲು ಸಾಧ್ಯ. ಕಾಶಿಪಟ್ಣ ಮತ್ತು ಹೊಸಂಗಡಿ ಗ್ರಾ.ಪಂ. ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ದರು. ದ.ಕ. ಜಿಲ್ಲಾ ಕಾರ್ಯಪಾಲಕ ಅಭಿಯಂತರರು ಜಯಾನಂದ ಪೂಜಾರಿ, ಮುಗೆರೋಡಿ ಕನ್‌ಸ್ಟ್ರಕ್ಷನ್‌ನ ಮ್ಯಾನೇಜರ್ ದಾಮೋಧರ ಶೆಟ್ಟಿ ಇವರನ್ನು ಶಾಸಕರು ಸನ್ಮಾನಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸತೀಶ್ ಕೆ. ಶಾಶಿಪಟ್ಣ ಇವರು. ಶ್ರೀ ಪಂಚಲಿಂಗೇಶ್ವರ ಮತ್ತು ಆದಿಶಕ್ತಿ ಅಮ್ಮ ಈ ರಸ್ತೆ ಕರುಣಿಸಿದ್ದಾರೆ. ಈ ಕ್ಷೇತ್ರಕ್ಕೆ ಬರುವ ರಸ್ತೆ ಅತೀ ಶೀಘ್ರದಲ್ಲಿ ಅಭಿವೃದ್ಧಿ ಯಾಗಲಿ ಎಂದು ಕಳೆದ 10  ವರ್ಷದ ಬೇಡಿಕೆಯಾಗಿತ್ತು. ಅದು ಈಗ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪೂರ್ಣ ಗೊಂಡಿದೆ. ಗ್ರಾಮಸ್ಥರ ಪೂರ್ಣ ಬೆಂಬಲದೊಂದಿಗೆ ಕಾಶಿಪಟ್ಣ ಗ್ರಾ.ಪಂ. ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯರಾದ ಓಬಯ್ಯ ಆರಂಬೋಡಿ, ಮುಗೆರೋಡಿ ಕನ್‌ಸ್ಟ್ರಕ್ಷನ್‌ನ ಮೆನೇಜರ್ ದಾಮೋಧರ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಮಮತಾ, ದ.ಕ. ಜಿಲ್ಲಾ ಕಾರ್ಯಪಾಲಕ ಅಭಿಯಂತರರು ಜಯಾನಂದ ಪೂಜಾರಿ, ದ.ಕ. ಜಿಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೀರ್ತಿ, ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಗ್ರಾ.ಪಂ. ಮಾಜಿ ಸದಸ್ಯ ಅನುಪ್ ಕುಮಾರ್ ಜೈನ್, ಶ್ರೀ ಆದಿಶಕ್ತಿ ದೇವಸ್ಥಾನದ ಅರ್ಚಕ ವೆಂಕಟರಮಣ ಗೊಲ್ಲ, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಕಾಶಿಪಟ್ಣ ಹಾ.ಉ.ಸ. ಸಂಘದ ಅಧ್ಯಕ್ಷ ನಾರಾಯಣ ಭಟ್ ಕೇಳಗುತ್ತು, ಗ್ರಾ.ಪಂ. ಸದಸ್ಯರುಗಳಾದ ಪ್ರವೀಣ್ ಪಿಂಟೋ, ಮಹಮ್ಮದ್ ಶಾಫಿ, ಶ್ರೀಮತಿ ವಾರಿಜ, ಶ್ರೀಮತಿ ಸುಶೀಲ, ಶ್ರೀಮತಿ ವನಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸುದೇವ ಜಿ. ಉಪಸ್ಥಿತರಿದ್ದರು. ಮರೋಡಿ ಗ್ರಾ.ಪಂ. ಸದಸ್ಯ ಸದಾನಂದ ಪೂಜಾರಿ, ಪೆರಾಡಿ ಸೊಸೈಟಿಯ ನಿರ್ದೇಶಕ ಜಯಕುಮಾರ್ ಕೆ. ಪೆರಾಡಿಯ ದೇವರಾಜ್ ಶೆಟ್ಟಿ, ಕರುಣಾಕರ ಸುವರ್ಣ, ರಾಮಚಂದ್ರ ದೇವಾಡಿಗ ಪಾದೆ, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೇಳದಪೇಟೆ ಸ.ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಕಾಶಿಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ ಕೇಳಗುತ್ತು ವಂದಿಸಿ, ಗ್ರಾ.ಪಂ. ಸದಸ್ಯ ಮಹಮ್ಮದ್ ಶಾಫಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ. ಸಿಬ್ಬಂದಿ ಸುರೇಖಾ ಪ್ರಾರ್ಥನೆ ಹಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.