ಕೌಕ್ರಾಡಿ ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ

ಶೃದ್ಧೆ ,ಭಕ್ತಿಯ ಸೇವೆಯಿಂದ ಭಗವಂತನ ಸಾನಿಧ್ಯ ವೃಧ್ಧಿ: ಸುಬ್ರಹ್ಮಣ್ಯ ಸ್ವಾಮೀಜಿ

ನೆಲ್ಯಾಡಿ: ದೇವರಿಗೆ ಅರ್ಪಿಸುವ ಪೂಜೆಯೊಂದಿಗೆ ಊರಿನ ಭಕ್ತರ ಶೃದ್ಧೆ ಹಾಗೂ ಭಕ್ತಿಯ ಸೇವೆಯಿಂದ ಭಗವಂತನ ಸಾನಿಧ್ಯ ವೃಧ್ದಿಯಾಗಲಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಕೌಕ್ರಾಡಿ ಗ್ರಾಮದ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಮಾ. 23 ರಂದು ತ್ರಿಗುಣಾತ್ಮಿಕ ವೇದಿಕೆಯಲ್ಲಿ ನಡೆದ ಧಾರ್ಮಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಎಲ್ಲರ ಸಹಕಾರದೋಂದಿಗೆ ಇಲ್ಲಿ ಶಿಲಾಮಯ ದೇವಾಲಯ ನಿರ್ಮಾಣಗೊಂಡಿದೆ. ಮುಂದೆ ಊರಿನ ಭಕ್ತರು ದೇವಾಲಯಕ್ಕೆ ನಿರಂತರ ಭೇಟಿ ನೀಡುತ್ತಿರಬೇಕು. ಇದರೊಂದಿಗೆ ದೇವಾಲಯದಲ್ಲೂ ಯುಗಾದಿ ಸೇರಿದಂತೆ ವಿಶೇಷ ದಿನಗಳಲ್ಲಿ ಉತ್ಸವಗಳು ನಡೆಯಬೇಕು. ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದದಿಂದ ಊರಿನ ಜನರ ಬದುಕು ಬಂಗಾರವಾಗಲಿ ಎಂದು ಸುಬ್ರಹ್ಮಣ್ಯ ಸ್ವಾಮೀಜಿ ಆಶೀರ್ವದಿಸಿದರು. ಜೀರ್ಣೋದ್ಧಾರ ಸಮಿತಿ ಟ್ರಸ್ಟ್ ಗೌರವಾಧ್ಯಕ್ಷರೂ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ, ಗುರುವಂದನೆ ಸ್ವೀಕರಿಸಿದ ಕೆ.ಈಶ್ವರ ಭಟ್ ಕೊಡೆಂಕಿರಿ ಸಂದರ್ಭೋಚಿತವಾಗಿ ಮಾತನಾಡಿದರು.
ಕೊಕ್ಕಡ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭುವನೇಶ್ವರಿ ಎ ನೆಲ್ಯಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಮೇಶ್ ಶೆಟ್ಟಿ ಪಟ್ಟೆ, ರವಿರಾಮ ಗೋವಿಂದೂರು, ರಾಜಗೋಪಾಲ ಯಡಪಡಿತ್ತಾಯ, ಜೀರ್ಣೋದ್ಧಾರ ಸಮಿತಿ ಟ್ರಸ್ಟ್‌ನ ಪ್ರಧಾನ ಸಲಹೆಗಾರ ಎನ್.ಈಶ್ವರ್ ಭಟ್ ಕೊಡೆಂಕಿರಿ, ಚಪ್ಪರ ಸಮಿತಿ ಅಧ್ಯಕ್ಷ ಜಿನ್ನಪ್ಪ ಗೌಡ ಬದಿಯಡ್ಕ, ಸಂಚಾಲಕ ಜಿನ್ನಪ್ಪ ಗೌಡ ಕುತ್ಯಡ್ಕ, ವಿಜಯ ಶಿಲ್ಪಿ ಕೊರಗಪ್ಪ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವರಾಮ ಪಾರ್ಪಿಕಲ್ಲು, ಗಗನ್ ಕೌಕ್ರಾಡಿ, ಶೀನಪ್ಪ ಗೌಡ ಮೂಡುಬೈಲು, ನಾರಾಯಣ ಗೌಡ ಗುಂಡಿ, ಆನಂದ ನೇತ್ರಾಳ ಮತ್ತಿತರರು, ಅತಿಥಿಗಳಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.