HomePage_Banner_
HomePage_Banner_
HomePage_Banner_

ಗುರಿಪಳ್ಳ ರಸ್ತೆಯಲ್ಲಿ ಟ್ಯಾಂಕರ್ ಬೈಕ್ ಅಪಘಾತ : ಬೈಕ್ ಸವಾರರಿಬ್ಬರ ದಾರುಣ ಸಾವು

Advt_NewsUnder_1

                                                                                               ಸುಧೀರ್ ಶೆಟ್ಟಿ

                                                                                                   ಹರೀಶ್ ಶೆಟ್ಟಿ

ಬೆಳ್ತಂಗಡಿ: ಉಜಿರೆಯಿಂದ ಗುರಿಪಳ್ಳ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಶುಕ್ರವಾರ ರಾತ್ರಿ 10.30 ರ ನಂತರ ಅಳಕ್ಕೆ ಎಂಬಲ್ಲಿ ನಡೆದ ಬೈಕ್ ಮತ್ತು ಟ್ಯಾಂಕರ್ ಅಪಘಾತದಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಧ್ಯವಯಸ್ಕರು ಧಾರುಣವಾಗಿ ಮೃತಪಟ್ಟ ಘಟನೆ ಮಾ. 23 ರಂದು ನಡೆದಿದೆ. ಮೃತರನ್ನು ಗುರಿಪಳ್ಳ ಗುತ್ತುಲಾರಬೆಟ್ಟು ನಿವಾಸಿ ಸದ್ದು ಶೆಟ್ಟಿ ಅವರ ಪುತ್ರ ಹರೀಶ್ ಶೆಟ್ಟಿ (35 ವ.) ಮತ್ತು ಸಹ ಸವಾರ, ಸಂಬಂಧಿಯೂ ಆದ ವಿಠಲ ಶೆಟ್ಟಿ ಅವರ ಪುತ್ರ ಸುಧೀರ್ ಶೆಟ್ಟಿ(37 ವ.) ಅವರು ಮೃತಪಟ್ಟವರಾಗಿದ್ದಾರೆ.
ಉಜಿರೆಯ ಎಸ್‌ಡಿಎಂ ಐಟಿ ಕಾಲೇಜಿನ ಕ್ಯಾಂಟೀನ್‌ನಲ್ಲಿ ಕಾರ್ಮಿಕನಾಗಿರುವ ಹರೀಶ್ ಶೆಟ್ಟಿ ಯವರು ತಮ್ಮ ಸಂಬಂಧಿ ಹಾಗೂ ಮಿತ್ರರೂ ಆಗಿರುವ ಸುಧೀರ್ ಅವರನ್ನು ಕರೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಪುಷ್ಪರಾಜ್ ಅವರು ಚಲಾಯಿಸುತ್ತಿದ್ದ ಟ್ಯಾಂಕರ್‌ಗೆ ನೇರ ಡಿಕ್ಕಿಹೊಡೆದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪುಷ್ಪರಾಜ್ ಅವರು ಮನೆಗೆ ಬಂದಿದ್ದವರು ಟ್ಯಾಂಕರ್‌ನಲ್ಲಿ ಮತ್ತೆ ಉಜಿರೆ ಕಡೆಗೆಂದು ಡ್ಯೂಟಿ ಮೇಲೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮೃತರ ಪೈಕಿ ಸುಧೀರ್ ಶೆಟ್ಟಿ ಅವರು ಮುಂಬೈಯಲ್ಲಿ ಉದ್ಯೋಗದಲ್ಲಿದ್ದು ರಜೆಯ ಮೇಲೆ ಊರಿಗೆ ಬಂದಿದ್ದವರು ಮಾ. 24  (ಶನಿವಾರ) ಮತ್ತೆ ಮರಳುವವರಿದ್ದರೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಮೃತ ಇಬ್ಬರೂ ವಿವಾಹಿತರಾಗಿದ್ದು, ಹರೀಶ್ ಶೆಟ್ಟಿಯವರು ಪತ್ನಿ ಸ್ನೇಹಾ, ಒಂದೂವರೆ ವರ್ಷದ ಹೆಣ್ಣು ಮಗು ಹಂಷಿಕಳನ್ನು ಅಗಲಿದ್ದಾರೆ.
ಸುಧೀರ್ ಅವರು ಪತ್ನಿ ಅಶ್ವಿನಿ, ಇಬ್ಬರು ಹೆಣ್ಣು ಮಕ್ಕಳಾದ ವಿದ್ಯಾ- ಆದ್ಯಾ ಅವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.