ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ 23 ರಸ್ತೆಗಳಿಗೆ ರೂ.4 ಕೋಟಿ ಮಂಜೂರು

ಬೆಳ್ತಂಗಡಿ : ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಗ್ರಾಮೀಣ ರಸ್ತೆಗಳ ದುರಸ್ಥಿ ಹಾಗೂ ನಿರ್ವಹಣೆಗಾಗಿ ಬೆಳ್ತಂಗಡಿ ತಾಲೂಕಿನ 23 ರಸ್ತೆಗಳ ಅಭಿವೃದ್ಧಿಗೆ ರೂ.4  ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದ್ದಾರೆ.
ಮಂಜೂರುಗೊಂಡ ಕಾಮಗಾರಿಗಳು- ಪೆರಾಡಿ ಗ್ರಾಮದ ಮಂಞನೊಟ್ಟು ರಸ್ತೆ ಅಭಿವೃದ್ಧಿ ರೂ .40 ಲಕ್ಷ, ಪೆರಾಡಿ ಗ್ರಾಮದ ರಾಮಪ್ಪನ ಅಂಗಡಿಯಿಂದ 5 ಸೆಂಟ್ಸ್ ಕಾಂಕ್ರೀಟಿಕರಣ ರೂ. ೨೦ ಲಕ್ಷ, ಪೆರಾಡಿ ಗ್ರಾಮದ ಮಸೀದಿ ಬಳಿ ರಸ್ತೆ ಕಾಂಕ್ರೀಟಿಕರಣ ರೂ. 10 ಲಕ್ಷ, ಪೆರಾಡಿ ಗ್ರಾಮದ ಕೆರಾಡಿ ಭಂಡಸಾಲೆಯಿಂದ ಕಂಬಲದಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ ರೂ. 15 ಲಕ್ಷ, ಮರೋಡಿ ಗ್ರಾಮದ ನಾರಲ್ಕೆಯಿಂದ – ಕಲ್ಲೊಟ್ಟುಬೈಲು ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಬೆಳಾಲು ಗ್ರಾಮದ ಕೊಲ್ಪಾಡಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ರೂ. 25 ಲಕ್ಷ, ಮೂಡುಕೋಡಿ ಗ್ರಾಮದ ಬೈಪಾಲಬೆಟ್ಟು ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಮಾಲಾಡಿ ಗ್ರಾಮದ ಮಾಲಾಡಿ-ಪಡಂಗಡಿ ರಸ್ತೆ ಅಭಿವೃದ್ಧಿ ರೂ. 40  ಲಕ್ಷ, ಮಾಲಾಡಿ ಗ್ರಾಮದ ಶಕ್ತಿನಗರ ಚಾಂದಬಿ ಮನೆಯಿಂದ ವಲೇರಿಯನ್ ಪಾಯಿಸ್ ಮನೆವರೆಗೆ ರಸ್ತೆ ಕಾಂಕ್ರೀಟೀಕರಣ ರೂ. 12 ಲಕ್ಷ, ಮೇಲಂತಬೆಟ್ಟು ಗ್ರಾಮದ ಮಂಜದಬೆಟ್ಟು ಸವಣಾಲು ಎಂಬಲ್ಲಿ ಪೈಪ್ ಅಳವಡಿಸುವುದು ರೂ. 4 ಲಕ್ಷ, ನಿಡ್ಲೆ ಗ್ರಾಮದ ದೇವನಾಜೆ ರಸ್ತೆ ಅಭಿವೃದ್ಧಿ ರೂ. ೪ಲಕ್ಷ
ಪಡಂಗಡಿ ಗ್ರಾಮದ ಸುಬೋದಮಹಲ್ ಗುತ್ತಿಗೆಗುಡ್ಡೆ ರಸ್ತೆ ಕಾಂಕ್ರೀಟೀಕರಣ ರೂ. 20 ಲಕ್ಷ, ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆಯಿಂದ ಮೆಕಾಜೆ ರಸ್ತೆ ಕಾಂಕ್ರೀಟೀಕರಣ ರೂ. 20  ಲಕ್ಷ, ನಿಟ್ಟಡೆ ಗ್ರಾಮದ ಪಂಡಂಟೆ ಪ.ಜಾತಿ ಕಾಲೋನಿ ರಸ್ತೆ ಕಾಂಕ್ರೀಟೀಕರಣ ರೂ. 20 ಲಕ್ಷ, ನಾಲ್ಕೂರು ಗ್ರಾಮದ ಬೊಕ್ಕಸ ರಸ್ತೆ ಕಾಂಕ್ರೀಟೀಕರಣ ರೂ. 20 ಲಕ್ಷ, ಮಾಲಾಡಿ ಗ್ರಾಮದ ತುಂಬೆ ರಸ್ತೆ ಕಾಂಕ್ರೀಟೀಕರಣ ರೂ. 20  ಲಕ್ಷ, ನಿಟ್ಟಡೆ ಗ್ರಾಮದ ಪೆರ್ಮುಡ ರಸ್ತೆ ಬಳಿಯಿಂದ ಹೊಳೆತನಕ ಮೋರಿ ಅಳವಡಿಕೆ
ರೂ. 10 ಲಕ್ಷ, ತೆಂಕಕಾರಂದೂರು ಗ್ರಾಮದ ಗಿಳಿಕಾಪು ರಸ್ತೆ ಕಾಂಕ್ರೀಟೀಕರಣ ರೂ. 25  ಲಕ್ಷ, ಗರ್ಡಾಡಿ ಗ್ರಾಮದ ಬಿಲ್ಲವರ ಸಂಘದಿಂದ ಹೊಸಮನೆ ರಸ್ತೆ ಕಾಂಕ್ರೀಟೀಕರಣ ರೂ. 10 ಲಕ್ಷ, ತೆಂಕಕಾರಂದೂರು ಗ್ರಾಮದ ಸುದೆಗುಂಡಿ ರಸ್ತೆ ಕಾಂಕ್ರೀಟೀಕರಣ ರೂ. 20 ಲಕ್ಷ, ನಿಟ್ಟಡೆ ಗ್ರಾಮದ ನೆಲ್ಲಿಗುಡ್ಡೆ ಪ.ಜಾತಿ ಕಾಲೋನಿ ರಸ್ತೆ ಕಾಂಕ್ರೀಟಿಕರಣ ರೂ. 10 ಲಕ್ಷ, ಕುವೆಟ್ಟು ಗ್ರಾಮದ ಅರೆಮಲೆಬೆಟ್ಟ 5  ಸೆಂಟ್ಸ್ ಕಾಲೋನಿ ಕಾಂಕ್ರೀಟಿಕರಣ ರೂ.15 ಲಕ್ಷ, ತೆಂಕಕಾರಂದೂರು ಗ್ರಾಮದ ಓಡದಕರಿಯ ರಸ್ತೆ ಕಾಂಕ್ರೀಟಿಕರಣ ರೂ. 10 ಲಕ್ಷ ಒಟ್ಟು ರೂ.400 ಲಕ್ಷ ಮಂಜೂರಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.