ಪಿಲ್ಯ ಗ್ರಾಮದ ಬಳ್ಳಾಲ್ತಿ ಕಂಬಳ ನಾಗಬನದಲ್ಲಿ 57  ನಾಗಶಿಲಾ ಬಿಂಬಗಳ ಜಲಾಧಿವಾಸ

 ಬೆಳ್ತಂಗಡಿ: ಪಿಲ್ಯ ಗ್ರಾಮದಲ್ಲಿರುವ ಬಳ್ಳಾಲ್ತಿ ಕಂಬಳ ನಾಗಬನಕ್ಕೆ ಕುತ್ಲೂರು ಶಿಲ್ಪ ಕಲಾ ಕೇಂದ್ರದಿಂದ 57  ನಾಗಶಿಲಾ ಬಿಂಬಗಳ ಬೃಹತ್ ಮೆರವಣಿಗೆ ಹಾಗೂ ಅವುಗಳ ಜಲಾಧಿವಾಸ ಕಾರ್ಯಕ್ರಮ ಶನಿವಾರ ನೆರವೇರಿತು.
ಪಿಲ್ಯ ಬೀಡು ಎಂಬಲ್ಲಿ ಪ್ರಾಚೀನ ನಾಗಬನವಿರುವುದು ಕಂಡು ಬಂದಿದ್ದು ಅಲ್ಲಿ ಅದನ್ನು ನವೀಕರಣ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸುವಾಗ ಸುಮಾರು ೫೦ಕ್ಕೂ ಹೆಚ್ಚು ವಿವಿಧ ರೀತಿಯ ನಾಗ ಶಿಲ್ಪಗಳು ಭಿನ್ನರೂಪದಲ್ಲಿ ಕಂಡು ಬಂದಿದ್ದವು. ಹೀಗಾಗಿ ಅಲ್ಲಿ ಬಳ್ಳಾಲ್ತಿ ಕಂಬಳ ನಾಗಬನ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ನೂತನವಾಗಿ 57  ನಾಗಗಳ ಶಿಲಾ ಬಿಂಬ ಹಾಗೂ ಪ್ರಾಯಶ್ಚಿತ್ತ ಬಿಂಬಗಳನ್ನು ಕುತ್ಲೂರಿನಿಂದ ತರಲಾಯಿತು. ಬಳ್ಳಾಲ್ತಿ ಕಂಬಳ ಬನದಲ್ಲಿ ಅದಕ್ಕೆ ವೈದಿಕ ಪೂಜೆಗಳನ್ನು ನೆರವೇರಿಸಿ ಅದನ್ನು ಜಲಾಧಿವಾಸಗೊಳಿಸಲಾಯಿತು. ಎ. 29 ರಂದು ಎಲ್ಲಾ ಮೂರ್ತಿಗಳ ಪ್ರತಿಷ್ಠೆ ನೆರವೇರಲಿದೆ.
ಈ ಸಂದರ್ಭ ಮೆರವಣಿಗೆಗೆ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಚಾಲನೆ ನೀಡಿದರು. ಜಲಾಧಿವಾಸ ಸಂದರ್ಭ ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲ, ಸಮಿತಿ ಅಧ್ಯಕ್ಷ ನಾಟಿವೈದ್ಯ ಬೇಬಿ ಪೂಜಾರಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು, ಸದಸ್ಯರಾದ ಸದಾನಂದ ಪೂಜಾರಿ ಉಂಗಿಲಬೈಲು, ಸತೀಶ್ ತಾಮನ್ಕಾರ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.