ಬಳೆಂಜ ಗ್ರಾಮದ ಮುಜ್‌ಕಾನ ಕೊಡಮಣಿತ್ತಾಯ ದೈವಸ್ಥಾನದ ನೇಮೋತ್ಸವ

ಬೆಳ್ತಂಗಡಿ: ಬಳಂಜ, ನಾಲ್ಕೂರು,  ಗ್ರಾಮಕ್ಕೆ ಸಂಬಂಧಪಟ್ಟ ಮುಜ್‌ಕಾನ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಲಯ ಸಮರ್ಪಣೆ ಮತ್ತು ನೂತನ ಮಂಚ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮೋತ್ಸವ ಮಾ10 ಮತ್ತು 11 ನಡೆಯಲಿದ್ದು ಈ ಸಂಬಂಧ ದೈವದ ನೂತನ ಮಂಚ, ನೂತನ ದೈವಾಲಯದ ಕಲಶ ಹಾಗೂ ಹೊರೆಕಾಣಿಕೆ ಮೆರವಣಿಗೆ ಶನಿವಾರ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ನಡೆಯಿತು.
ವಕೀಲ ಹರೀಶ್ ಪೂಂಜ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅತಿಥಿಗಳಾಗಿ ಉದ್ಯಮಿಗಳಾದ ಅಭಿನಂದನ್ ಹರೀಶ್ ಕುಮಾರ್, ಅಶ್ವಥ್ ಹೆಗ್ಡೆ ಉಪಸ್ಥಿತರಿದ್ದರು. ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲ ಮಾರ್ಗದರ್ಶನ ನೀಡಿದರು.
ಆನೆಪಿಲ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ರೈ, ಉಪಾಧ್ಯಕ್ಷ ಅಜಿತ್ ಕುಮಾರ್ ಹೇರಗುತ್ತು, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯ ಹಾಗೂ ಅಳದಂಗಡಿ ರಿಕ್ಷಾ ಮಾಲಕರ ಮಾಲಕ ಸಂಘದ ಸಹಕಾರದೊಂದಿಗೆ ವಿವಿಧ ವಾಹನಗಳಲ್ಲಿ ಹೊರೆಕಾಣಿಕೆಯನ್ನು ಅಳದಂಗಡಿ ಪೇಟೆ ಮೂಲಕ ಆನೆಪಿಲಕ್ಕೆ ತರಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.