ಗುರುವಾಯನಕೆರೆ ಉರೂಸ್ ಸಮಾರೋಪ

 

ಗುರುವಾಯನಕೆರೆ : ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸೀದಿ ವತಿಯಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಮಾ. 3  ರಂದು ಸಮಾರೋ ಗೊಂಡಿತು. ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ದುಆ ಪ್ರಾರ್ಥನೆಗೆ ಅವರು ನೇತೃತ್ವ ನೀಡಿದರು.
ಸಮಾರೋಪ ಪ್ರಯುಕ್ತ ಬೆಳಿಗ್ಗೆ ದರ್ಗಾದಲ್ಲಿ ಖತ್‌ಮುಲ್ ಖುರ್‌ಆನ್ ಪಾರಾಯಣ ನಡೆಯಿತು. ರಾತ್ರಿ ನಡೆದ ಸಮಾರೋಪದಲ್ಲಿ ಖ್ಯಾತ ವಾಗ್ಮಿ, ಕೇರಳ ಅಲ್ಪಸಂಖ್ಯಾತರ ಮಂಡಳಿ ನ್ಯಾಯಾಧೀಶ ಮುಹಮ್ಮದ್ ಅಲಿ ಸಖಾಫಿ ಮುಳ್ಳೂರ್‌ಕೆರೆ ಮುಖ್ಯ ಪ್ರಭಾಷಣ ನಡೆಸಿಕೊಟ್ಟರು.
ಫೆ. 28 ರಂದು ನಡೆದ ದಿಕ್ರ್ ಹಲ್ಕಾ ವೇದಿಕೆಯಲ್ಲಿ ಸಯ್ಯಿದ್ ಮಜಲ್‌ಜಅ ತಂಙಳ್, ಸಯ್ಯಿದ್ ಸಾದಾತ್ ತಂಙಳ್, ಕಾವಳಕಟ್ಟೆ ಹಝ್ರತ್, ಸಯ್ಯಿದ್ ಇಸ್ಮಾಯಿಲ್ ತಂಙಳ್, ಪೆರ್ನೆ ಉಸ್ತಾದ್ ಸಯ್ಯಿದ್ ಮುರ ತಂಙಳ್, ಹಮೀದ್ ಫೈಝಿ ಕಿಲ್ಲೂರು, ಮುದರ್ರಿಸ್ ಕೆ.ಎಚ್. ಸುಲೈಮಾನ್ ಫಾಳಿಲಿ, ಮೊದಲಾದವರು ಭಾಗಿಯಾಗಿದ್ದರು. ಮಾ.1 ರಂದು ಮಶ್‌ಊದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನೆರವೇರಿಸಿದರೆ, ಮಾ. 2 ರಂದು ಅತಾವುಲ್ಲ ಹಿಮಮಿ ಮುಖ್ಯ ಪ್ರಭಾಷಣ ನಡೆಸಿದರು. ಉರೂಸ್ ದಿನ ನಾಡಿನ ಉದ್ದಗಲದಿಂದ ಸಾವಿರಾರು ಧರ್ಮಾಭಿಮಾನಿಗಳು, ಸರ್ವ ಧರ್ಮೀಯ ಬಂದುಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಅನ್ನದಾನ ವ್ಯವಸ್ಥೆ ಏರ್ಪಡಿಸಲಾಗಿತ್ತು. ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ, ಮಸೀದಿ ಸಮಿತಿ ಅಧ್ಯಕ್ಷ ಉಸ್ಮಾನ್ ಬಳೆಂಜ, ಸಹಿತ ಎಲ್ಲಾ ಪದಾಧಿಕಾರಿಗಳು, ಕರಿಯದ ಎಲ್ಲಾ ಜಮಾಅತ್‌ಗಳ ಪದಾಧಿಕಾರಿಗಳು, ಧರ್ಮ ಗುರುಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.