ರೋ| ಗಿರೀಶ್ ಭಾರದ್ವಾಜ್‌ರವರಿಗೆ ರೋಟರಿ ವತಿಯಿಂದ ಸನ್ಮಾನ

 

ಬೆಳ್ತಂಗಡಿ : ಸುಮಾರು ನಾಲ್ಕು ದಶಕಗಳ ಹಿಂದೆ ತನ್ನ ಪರಿಸರದಲ್ಲಿ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಯಿಂದಾಗಿ ಆ ಭಾಗದ ಜನ ಸಾಮಾನ್ಯರಿಗೆ ನದಿ ದಾಟುವ ಸೇತುವೆಯು ಇಲ್ಲದ ಪರಿಸ್ಥಿತಿಯಲ್ಲಿ ಗ್ರಾಮಸ್ಥರ ಬೇಡಿಕೆಗೆ ಪ್ರಬಲವಾದ ಇಚ್ಚಾ ಶಕ್ತಿ ಹಾಗೂ ತನ್ನ ತಾಂತ್ರಿಗ ಆವಿಷ್ಕಾರದಿಂದ ಆಯಾಯ ಪ್ರದೇಶದ ಮಣ್ಣು ಹಾಗೂ ನೆರೆ ಮಟ್ಟಕ್ಕೆ ಅನುಗುಣವಾಗಿ ಕರ್ನಾಟಕ, ಕೇರಳ, ಆಂದ್ರ ಪ್ರದೇಶ, ಒರಿಸ್ಸಾ ರಾಜ್ಯಗಳ ವಿವಿಧ ಗ್ರಾಮೀಣ ಭಾಗಗಳಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಸುಮಾರು 129 ತೂಗು ಸೇತುವೆಗಳನ್ನು ನಿರ್ಮಿಸಿ ಸೇತು ಬಂಧು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರೋ| ಗಿರೀಶ್ ಭಾರದ್ವಾಜ್ ಇವರನ್ನು ಬೆಳ್ತಂಗಡಿ ರೋಟರಿ ವತಿಯಿಂದ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರೋ| ಡಾ. ಸುಧೀರ್ ಪ್ರಭು, ಕಾರ್ಯದರ್ಶಿ ಡಾ.ಪ್ರದೀಪ್ ನಾವೂg, ರೋ| ಜಯಕುಮಾರ್‌ಶೆಟ್ಟಿ, ರೋ| ಪ್ರಕಾಶ್ ಪ್ರಭು, ರೋ|ಉದಯಚಂದ್ರ ಪ್ರತಾಪ್ ಸಿಂಹ ನಾಯಕ್, ರೋ| ಅಮರನಾಥ ಪ್ರಸಾದ್ ಮೊದಲಾದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.