ಬೆಳ್ತಂಗಡಿ: ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳಿಗೆ, ಪೊಲೀಸರಿಗೆ, ನಾಗರೀಕರಿಗೆ, ಹಿಂದೂ ಕಾರ್ಯ ಕರ್ತರಿಗೆ, ಮಹಿಳೆಯರಿಗೆ ಯಾರಿಗೂ ಸೂಕ್ತರಕ್ಷಣೆ ಇಲ್ಲದೆ ಜೀವ ಕಳೆದುಕೊಳ್ಳುತಿದ್ದಾರೆ. ಈ ಸರಕಾರ ನಲಪಾಡ್, ಅಶೋಕ್ ಖೇಣಿ, ಜಾರ್ಜ್ ಮುಂತಾದ ಆರೋಪಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ಈಗ ಭ್ರಷ್ಟರನ್ನು ಸದೆಬಡಿಯಲು ಇದ್ದ ಏಕೈಕ ಸಂಸ್ಥೆ ಲೋಕಾಯುಕ್ತದ ಲೋಕಯುಕ್ತ ನ್ಯಾ| ವಿಶ್ವನಾಥರ ಮೇಲೆ ಚೂರಿ ಇರಿದು ಕೊಲೆಯತ್ನ ನಡೆದಿರುವುದು ಖಂಡನೀಯವಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸರಕಾರ ಇದೆಯೋ? ಇಲ್ಲವೋ? ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ದಕ್ಷ ಅಧಿಕಾರಿಗಳ, ಪೊಲೀಸರ ಮೇಲೆ ದೌರ್ಜನ್ಯ ಆತ್ಮಹತ್ಯೆ, ಕೊಲೆಗಳು ನಡೆದರೆ ಹಿಂದೂಗಳ, ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆಗಳು ಕೊಲೆಗಳು ನಿರಂತರವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಸರಕಾರ ಪೊಲೀಸ್ ಇಲಾಖೆಯನ್ನು ಉಪಯೋಗ ಮಾಡಿ ಸುಳ್ಳು ಕೇಸ್ ಹಾಕುವ ಸಂಗತಿಗಳು ನಡೆಯುತ್ತಿದೆ.
ಲೋಕಾಯುಕ್ತವನ್ನು ಮುಗಿಸಲು ಮುಂದಾಗಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಜನರ ವಿರೋಧದಿಂದ ಅದನ್ನು ಹಲ್ಲು ಇಲ್ಲದಂತೆ ಇಟ್ಟುಕೊಂಡಿತ್ತು ಇವತ್ತು ಅದರ ಮುಖ್ಯಸ್ಥರ ಮೇಲೆ ಕೊಲೆಯತ್ನ ಚೂರಿ ಇರಿತ ನಡೆದಿರುವುದು ಬೇಲಿಯೇ ಎದ್ದು ಹೊಲ ಮೈಯ್ದಂತೆ ಆಗಿದೆ ಇದನ್ನು ದ.ಕ. ಜಿಲ್ಲೆ ಯುವಮೋರ್ಚಾ ತೀರ್ವವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.