ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ನಾರಾವಿಯ ಯುವರಾಜ್ ಜೈನ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಕಂಬಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸರಕಾರ ರಾಜ್ಯ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಖುಷಿ ತಂದಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ನನಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಚಿರಋಣಿ. ಇದೀಗ ನನಗೆ 63 ವರ್ಷ ವಯಸ್ಸಾಗಿದ್ದು, ಮುಂದೆಯೇ ಕೋಣಗಳ ಓಟಗಾರನಾಗಿ ಮುಂದುವರಿಯುವ ಹುಮ್ಮಸ್ಸು ಇದೆ. -ಯುವರಾಜ ಜೈನ್, ನಾರಾವಿ

ನಾರಾವಿ : ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು217-18ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಬೆಳ್ತಂಗಡಿ ತಾಲೂಕಿನ ನಾರಾವಿಯ ಯುವರಾಜ್ ಜೈನ್ ಅವರು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
35 ವರ್ಷಗಳಿಂದ ಕಂಬಳ ಕೋಣಗಳನ್ನು ಓಡಿಸುತ್ತಿದ್ದ ಇವರು ಗ್ರಾಮೀಣ ಕ್ರೀಡೆ ಕಂಬಳ ಕ್ಷೇತ್ರದ ವಿಶಿಷ್ಠ ಸಾಧನೆಗೈದು ಸುಮಾರು ೬೦೦ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಈ ಬಾರಿಯ ಕಂಬಳದ 16 ಕಡೆ ಭಾಗವಹಿಸಿ 24 ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡವರು. ಕನಹಲಗೆ ಮತ್ತು ಅಡ್ಡಹಲಗೆಯ ಕೋಣಗಳನ್ನು ಓಡಿಸುತ್ತಿದ್ದರು. ಈ ಹಿಂದೆ ಸ್ವತಹ ಕೋಣಗಳನ್ನು ತಾವೇ ಹೊಂದಿದ್ದ ಇವರು ಇದೀಗ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೇರಳ, ಮಂಜೇಶ್ವರ, ಬಾರ್ಕೂರ ಕಡೆಗಳಲ್ಲಿಯೂ ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತಿದ್ದ ಇವರು ಸುಮಾರು ೧೫ ಕಡೆಗಳಲ್ಲಿ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.