HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪಟ್ಟೂರು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ

 

ಪಟ್ರಮೆ: ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಗೊಡುಗೆ ಕಾರ್ಯಕ್ರಮವಾದ ದೀಪ ಪ್ರದಾನ ಕಾರ್ಯಕ್ರಮವು ಫೆ.28 ರಂದು ಸಂಸ್ಥೆಯ ವೇದವ್ಯಾಸ ಸಭಾಭವನದಲ್ಲಿ ನಡೆಯಿತು.
ದೀಪ ಪ್ರದಾನ ಕಾರ್ಯಕ್ರಮ ಒಂದು ಹೊಸತನದ ಕಾರ್ಯಕ್ರಮ. ದೀಪದಿಂದ ದೀಪಹಚ್ಚುವ ಕಾರ್ಯಕ್ರಮ. ನಿಮಗೆ ಸಿಕ್ಕಿರುವ ಸಂಸ್ಕಾರ. ಕತ್ತಲೆಯನ್ನು ಓಡಿಸಬೇಕಾದರೆ ದೀಪವನ್ನು ಬೆಳಗಿಸಲೇಬೇಕು. ಅಂತಹ ಕತ್ತಲೆಯನ್ನು ಓಡಿಸುವ ಬೆಳಕು ನೀವಾಗಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.
ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಸಂಪತ್ ಸುವರ್ಣರವರು ಎಸ್.ಎಸ್.ಎಲ್.ಸಿ ಎಂಬುದು ಜೀವನದ ಬಹುಮುಖ್ಯ ತಿರುವು. ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಮೂಲಕ ಶಿಕ್ಷಣ ನೀಡುತ್ತಿರುವ ಈ ವಿದ್ಯಾಸಂಸ್ಥೆಯ ಮಕ್ಕಳಾದ ನೀವು ಪರಿಸರವನ್ನು ಬೆಳಗುವ ಹಣತೆಗಳಾಗಿ ಎಂದು ಶುಭಹಾರೈಸಿದರು.
ಇನ್ನೋರ್ವ ಅತಿಥಿ ರಾಮಮೂರ್ತಿ ಪಿಲಿಕಬೆ ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅರವಿಂದ ಕುಡ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ದೇರಾಜೆ, ಸದಸ್ಯರಾದ ಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ೯ನೇ ತರಗತಿ ವಿದ್ಯಾರ್ಥಿ ಮಮತ ಸ್ವಾಗತಿಸಿ, ಜ್ಯೋತಿಕ ವಂದಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.