ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿ.ಟಿ ಸೆಬಾಸ್ಟಿಯನ್ ಆಯ್ಕೆ

ಬೆಳ್ತಂಗಡಿ ತಾ.ಪಂ ೨ನೇ ಅವಧಿಯ ಸಾಮಾಜಿಕ ಯೋಜನೆ ಮತ್ತು ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಗೆ ಆಯ್ಕೆ ಪ್ರಕ್ರಿಯೆ ಫೆ.2 ರಂದು ನಡೆಯಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಬಿ.ಟಿ ಸಬಾಸ್ಟಿಯನ್ ಅವಿರೋಧ ಆಯ್ಕೆಯಾದರು. ಸದಸ್ಯರಾಗಿ ಜಯರಾಮ, ವಿನೂಷ, ರೂಪಲತಾ, ವಸಂತಿ, ವಿಜಯ ಗೌಡ, ಆಯ್ಕೆಯಾದರು. ಹಣಕಾಸು ಯೋಜನೆ ಮತ್ತು ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸದಸ್ಯರಾಗಿ ಗೋಪಿನಾಥ್ ನಾಯಕ್, ಪ್ರವೀಣ್ ಗೌಡ, ಸುಜಾತಾ ರೈ, ಶಶಿಧರ ಎಂ., ಜೋಯಲ್ ಗೋಡ್ ಫ್ರೀ ಮೆಂಡೋನ್ಸ್ ಆಯ್ಕೆಯಾದರು. ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯರಾಗಿ ಸುಶೀಲಾ, ಓಬಯ್ಯ, ಜಯಶೀಲ, ಲಕ್ಷ್ಮೀನಾರಾಯಣ, ಕೇಶವತಿ, ಆಯ್ಕೆಯಾದರು. ಶಾಸಕ. ಕೆ.ವಸಂತ ಬಂಗೇರ ಮಾತನಾಡಿ ಹಿತವಚನ ನೀಡಿದರು. ತಾ.ಪಂ ಅಧ್ಯಕ್ಷೆ ದಿವ್ಯ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ತಾ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.