ಗುರುವಾಯನಕೆರೆ ಹೈಮಾಸ್ಟ್ ಲೈಟ್ ಶಾಸಕರಿಂದ ಉದ್ಘಾಟನೆ

Advt_NewsUnder_1
Advt_NewsUnder_1

ಗುರುವಾಯನಕೆರೆ: ಶಾಸಕರ ಅನುದಾನದಲ್ಲಿ ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸೀದಿ ವಠಾರದಲ್ಲಿ ನೂತನವಾಗಿ ನಿರ್ಮಿಸಿದ ಹೈಮಾಸ್ಟ್ ಲೈಟನ್ನು ಶಾಸಕ ವಸಂತ ಬಂಗೇರ ಫೆ. 24 ರಂದು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ತಾಲೂಕಿಗೆ ಈ ಬಾರಿ ಸುಮಾರು 1 ಸಾವಿರ ಕೋಟಿ ರೂ. ಗಳಿಗಿಂತಲೂ ಅಧಿಕ ಮೊತ್ತದ ಅನುದಾನವನ್ನು ತಂದು ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲಾಗಿದೆ.
ಇನ್ನೂ ಅನೇಕ ಕಡೆಗಳಲ್ಲಿ ಬೇಡಿಕೆಗಳಿದ್ದು ಅವುಗಳ ಈಡೇರಿಕೆಗೂ ಪ್ರಯತ್ನಪಡಲಾಗುವುದು ಎಂದರು.
ಈ ಸಂದರ್ಭ ಮಸೀದಿ ಖತೀಬ್ ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್ ಗುರುವಾಯನಕೆರೆ, ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ ಗುರುವಾಯನಕೆರೆ, ಪ್ರ. ಕಾರ್ಯದರ್ಶಿ ಮುಹಮ್ಮದ್ ರಫಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಸ್ಮಾನ್ ಬಳೆಂಜ, ಕಾರ್ಯದರ್ಶಿ ಹನೀಫ್ ಸಹಿತ ಉಭಯ ಸಮಿತಿಗಳ ಎಲ್ಲಾ ಪದಾಧಿ ಕಾರಿಗಳು, ಜಿಲ್ಲಾ ಕಾಂಗ್ರೆಸ್ ಪದಾಧಿ ಕಾರಿ ಬಿ.ಎಮ್. ಹಮೀದ್ ಉಜಿರೆ ಹಾಗೂ ಗಣ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.