HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶ್ರೀರಾಮಕ್ಷೇತ್ರ ಸೇವಾ ಸಮಿತಿ ವತಿಯಿಂದ ಬಂಟ್ವಾಳದಲ್ಲಿ ಸೀತಾರಾಮ ಕಲ್ಯಾಣೋತ್ಸವ

ಸೆಪ್ಟೆಂಬರ್‌ನಲ್ಲಿ ಧರ್ಮ ಸಂಸತ್ತುಸೆಪ್ಟೆಂಬರ್‌ನಲ್ಲಿ ಧರ್ಮ ಸಂಸತ್ತುಸಮಾಜದಲ್ಲಿ ಸಂಸ್ಕಾರದ ಕೊರತೆಯಿಂದ ಕೇವಲ ಓಟು ಮತ್ತು ನೋಟಿನ ಕಡೆಗೆ ಜನರನ್ನು ಪ್ರವಾಹದ ರೀತಿಯಲ್ಲಿ ಆಕರ್ಷಿಸುತ್ತಿದೆ. ಸಮಾಜದಲ್ಲಿ ಯಾವುದೇ ಜಾತಿ, ಧರ್ಮ, ದೇವರು, ಪಕ್ಷ ಭೇದವಿಲ್ಲದೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಸಂದೇಶದಂತೆ ಎಲ್ಲರೂ ಸಮಾನವಾಗಿ ಮುನ್ನಡೆಯುವ ಅಗತ್ಯವಿದ್ದು, ಇದಕ್ಕೆ ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್ಲಾ ಸಂತರನ್ನೊಳಗೊಂಡ ಧರ್ಮ ಸಂಸತ್ತು ನಡೆಸಲು ನಿರ್ಧರಿಸಲಾಗಿದೆ. -ಕನ್ಯಾಡಿ ಶ್ರೀ

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಕನ್ಯಾಡಿ ಮತ್ತು ಬಂಟ್ವಾಳ ತಾಲೂಕು ಶ್ರೀರಾಮ ಕ್ಷೇತ್ರ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಮತ್ತು ಶ್ರೀರಾಮಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮ ಫೆ.19 ರಂದು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿಯ ಮೈದಾನ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ರಾಜ್ಯವನ್ನಾಳುವ ರಾಜ ದುರ್ಬಲನಾದರೆ ನಾಡಿನ ಸಮಸ್ತ ಜನತೆ ದುರ್ಬಲರಾಗುತ್ತಾರೆ. ನ್ಯಾಯಾಂಗ ಮತ್ತು ದಂಡಸಂಹಿತೆ ದುರ್ಬಲಗೊಂಡು ಧರ್ಮ ರಾಜಕಾರಣಕ್ಕೆ ಬದಲಾಗಿ ಧರ್ಮದಲ್ಲಿ ರಾಜಕೀಯ ನುಸುಳುವುದು ಎಂದಿಗೂ ಸಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮಕ್ಷೇತ್ರ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮೆಲ್ಕಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್‌ಕುಮಾರ್ ಕಟೀಲು , ಸಮಿತಿಯ ಗೌರವಾಧ್ಯಕ್ಷ ಮಾಜಿ ಶಾಸಕ ಎ. ರುಕ್ಮಯ್ಯ ಪೂಜಾರಿ, ಅಖಿಲಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುನಿತಾ ನಾಯಕ್, ಜೈನ್‌ಮಿಲನ್ ಅಧ್ಯಕ್ಷ ಬ್ರಿಜೇಶ್ ಜೈನ್, ಜಿ.ಎಸ್.ಬಿ. ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ನಾಯಕ್, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕೆ. ಲಿಂಗಪ್ಪ ಗೌಡ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ, ಕುಲಾಲ ಸೇವಾ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ, ಸವಿತಾ ಸಮಾಜ ಸಂಘದ ಅಧ್ಯಕ್ಷ ಸುರೇಶ, ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಕೆ. ಶೀನ, ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ನಾಯ್ಕ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದಪ್ಪ, ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ದಿವಾಕರ ಭಂಡಾರಿ, ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಬಾಬು ಮಾಸ್ಟರ್ ಭಟ್ಕಳ, ಯುವವಾಹಿನಿ ಘಟಕದ ಅಧ್ಯಕ್ಷ ಲೋಕೇಶ್ ಸುವರ್ಣ, ಬಂಟ್ವಾಳ ತಾ| ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಸ್ವಾಗತ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಮುಖರಾದ ಮೋಹನ ಬಿ.ಸಿ.ರೋಡು, ಬಿ. ವಿಶ್ವನಾಥ, ಸಂತೋಷ ಕೋಟ್ಯಾನ್ ತುಂಬೆ, ರಾಜೇಶ್ ಬಾಳೆಕಲ್ಲು, ಗೋಪಾಲ ಸುವರ್ಣ, ಜಯಶ್ರೀ ಕರ್ಕೇರ, ಜಯಂತಿ ಪೂಜಾರಿ, ಶ್ರೀರಾಮ ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ಮೋಹನ್ ಉಜ್ಜೋಡಿ, ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.