ತುಳುನಾಡಿನ ಸುಸಂಸ್ಕೃತವಾದ ಸಂಸ್ಕೃತಿ ಈ ದೈವರಾದನೆಯ ಒಳಗೆ ಅಡಕವಾಗಿದೆ. ಭಾರತ ದೇಶ ಜಗದ್ಗುರು ಆಗಲಿಕ್ಕೆ ಯಾಕೆ ತಯಾರಾಗುತ್ತದೆ ಎಂದರೇ ಒಂದು ಕೃಷಿ, ಇನ್ನೊಂದು ಖುಷಿ, ಕೃಷಿ ಪ್ರಾದನ್ಯಾತೆಯುಳ್ಳ ದೇಶ ಇದ್ದರೆ ಅದು ಭಾರತ, ಖುಷಿ ಯಾವುದು ಎಂದರೇ ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಆಚಾರ-ವಿಚಾರಗಳು ಖುಷಿ ಪದ್ದತಿಯೊಳಗೆ ಬರುತ್ತದೆ. ಹಾಗಾಗಿ ಕೃಷಿ ಮತ್ತು ಖುಷಿ ಇದು ಎರಡು ಉಳಿಯಬೇಕು. ತುಳುನಾಡಿನ ಸುಸಂಸ್ಕೃತವಾದ ಸಂಸ್ಕೃತಿ ಈ ದೈವರಾದನೆಯ ಒಳಗೆ ಅಡಕವಾಗಿದೆ. ಭಾರತ ದೇಶ ಜಗದ್ಗುರು ಆಗಲಿಕ್ಕೆ ಯಾಕೆ ತಯಾರಾಗುತ್ತದೆ ಎಂದರೇ ಒಂದು ಕೃಷಿ, ಇನ್ನೊಂದು ಖುಷಿ, ಕೃಷಿ ಪ್ರಾದನ್ಯಾತೆಯುಳ್ಳ ದೇಶ ಇದ್ದರೆ ಅದು ಭಾರತ, ಖುಷಿ ಯಾವುದು ಎಂದರೇ ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಆಚಾರ-ವಿಚಾರಗಳು ಖುಷಿ ಪದ್ದತಿಯೊಳಗೆ ಬರುತ್ತದೆ. ಹಾಗಾಗಿ ಕೃಷಿ ಮತ್ತು ಖುಷಿ ಇದು ಎರಡು ಉಳಿಯಬೇಕು. – ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕರಿಂಜೆ ಮಠ
ಶಿರ್ಲಾಲು : ನಮ್ಮಲ್ಲಿ ಶಕ್ತಿಯಿಲ್ಲ ದಿದ್ದರು ಭಕ್ತಿ ಬೇಕು, ಭಕ್ತಿಯಿದ್ದರೆ ದೈವ- ದೇವರ ಕೈಂಕರ್ಯ ಮಾಡಲು, ಸತ್ಕರ್ಮ ಪರಿವರ್ತನೆ ಮಾಡಿ ನಮ್ಮ ಜೀವನ ಪಾವನ ಮಾಡುವ ಶಕ್ತಿಯನ್ನು ದೈವ-ದೇವರು ನೀಡುತ್ತಾರೆ. ಎಂದು ಶ್ರೀ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಅವರು ಫೆ.19 ರಂದು ಶ್ರೀ ಪಿಲಿಚಾಮುಂಡಿಕಲ್ಲು ಮತ್ತು ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ಬಗ್ಯೋಟ್ಟು ಶಿರ್ಲಾಲು ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವದ ಧಾರ್ಮಿಕ ಸಭಾಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಯಾರು ತಪ್ಪು ಮಾಡುತ್ತಾರೋ, ಯಾರು ಅಧರ್ಮದ ದಾರಿಯಲ್ಲಿ ನಡೆಯುತ್ತಾರೋ, ಯಾರೂ ಅಸತ್ಯದಲ್ಲಿ ಹೋಗುತ್ತಾರೋ ಅಂತವರಿಗೆ ದೈವಗಳು ಶಿಕ್ಷೆ ಕೊಡುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ದೀಪ ಬೆಳಸುವುದರೊಂದಿಗೆ ನೆರವೇರಿಸಿ ಯಾವುದೇ ಕೆಲಸದಲ್ಲಿ ನಿರ್ಧಾರ ಮತ್ತು ಛಲವಿದ್ದರೆ ಆ ಕೆಲಸ ಯಶಸ್ವಿಯಾಗುತ್ತದೆ ಎಂಬುದಕ್ಕೆ ಬಗ್ಯೋಟ್ಟು ಕ್ಷೇತ್ರದ ಅಭಿವೃದ್ಧಿ ನೋಡಿದರೆ ಗೊತ್ತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕರಾದ ಗಂಗಾಧರ್ ಮಿತ್ತಮಾರ್ ವಹಿಸಿ ದೈವ-ದೇವರ ನಡಾವಳಿಗಳು ಕ್ರಮಬದ್ದವಾಗಿ ನಡೆಯುವ ಸೀಮೆ ಇದ್ದರೆ ಅದು ಅಳದಂಗಡಿ ಅಜಿಲ ಸೀಮೆ, ಈ ಸೀಮೆಯ ಸುತ್ತ-ಮುತ್ತಲಿನ ದೈವಸ್ಥಾನ- ದೇವಸ್ಥಾನ ಜೀರ್ಣೋ ದ್ದಾರ ಗೊಂಡು ಅಭಿವೃದ್ಧಿ ಯಾಗಿದೆ ತುಂಬಾ ಸಂತಸದ ವಿಚಾರ ಎಂದರು
ಮುಖ್ಯ ಅತಿಥಿ ಎಸ್.ಕೆ.ಡಿ.ಆರ್.ಡಿ. ಪಿ.ಯ ಜಿಲ್ಲಾ ನಿರ್ದೇಶಕ ಕೆ. ಚಂದ್ರಶೇಖರ್ ಮಾತನಾಡಿ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ ಜೀರ್ಣೋದ್ಧಾರಗೊಂಡು ಅಭಿವೃದ್ಧಿ ಯಾದರೆ ಊರು ಸುಭಿಕ್ಷವಾಗುತ್ತದೆ ಎಂದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ಎಚ್ ನಿತ್ಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಶಿರ್ಲಾಲು ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಶಿರ್ಲಾಲು ತಾ.ಪಂ ಸದಸ್ಯೆ ಜಯಶೀಲಾ ಕುಶಾಲಪ್ಪ ಗೌಡ, ಸಮಿತಿ ಕೋಶಾಧಿಕಾರಿ ಪ್ರಕಾಶ್ ಕುಮಾರ್ ಜೈನ್, ಪ್ರಧಾನ ಸಂಚಾಲಕ ಸುಂದರ ಬುನ್ನಾಲ್, ಹರ್ಷ ಆರ್ ಜೈನ್ ಕಾಯರಡ್ಕಗುತ್ತ, ಚಿದಾನಂದ ಪೊಸಂದೋಡಿ, ಅರ್ಚಕ ಸೂರ್ಯನಾರಾಯಣ ರಾವ್ ಉಪಸ್ಥಿತರಿದ್ದರು.
ಕು| ಸಿಂಚನಾ ಪ್ರಾರ್ಥನೆ ಹಾಡಿದರು, ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಸ್ವಾಗತಿಸಿದರು, ವಿಶ್ವನಾಥ ಸಾಲಿಯನ್ ಸನ್ಮಾನಿತರ ಪಟ್ಟಿ ಓದಿದರು, ಧಾರ್ಮಿಕ ಚಿಂತಕ ಪಿ.ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿ, ಸಮಿತಿ