ಅರಸಿನಮಕ್ಕಿ : ಅಂಗನವಾಡಿ ಕೇಂದ್ರ ಮೂಡೈಮಾರ್ ಉದ್ಘಾಟನೆ

ಅರಸಿನಮಕ್ಕಿ : ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಅರಸಿನಮಕ್ಕಿ ಗ್ರಾ.ಪಂ ಸಹಯೋಗದೊಂದಿಗೆ ಅಂಗನವಾಡಿ ಕೇಂದ್ರ ಮೂಡೈಮಾರ್ ಉದ್ಘಾಟನಾ ಸಮಾರಂಭವು ಫೆ. 18ರಂದು ಜರಗಿತು.
ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಿಪ್ರಸಾದ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷ ಎ. ಜಗನ್ನಾಥ ಗೌಡ, ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪ್ರಿಯಾ ಆಗ್ನೆಸ್ ಚಾಕೊ ಭಾಗವಹಿಸಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಪ್ಪ ಗೌಡ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.