ಮಲೆಯಾಳಿ ಕ್ರಿಶ್ಚಿಯನ್ ಅಶೋಸಿಯೇಶನ್ ವತಿಯಿಂದ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಬೆಳ್ತಂಗಡಿಯಲ್ಲಿ ಸಮಾಲೋಚನಾ ಸಭೆ: 16 ತಂಡ ಆಗಮನ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಇದರ ವತಿಯಿಂದ ಮಾ. 4 ರಂದು ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದ್ದು ಈ ಬಗ್ಗೆ ಫೆ. 13 ರಂದು ಬೆಳ್ತಂಗಡಿ ಸಂಘದ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿ ಸಹಕಾರದೊಂದಿಗೆ ನಡೆಯುವ ಈ ಕ್ರೀಡಾಕೂಟದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ತಾ| ಸಮಿತಿ ಅಧ್ಯಕ್ಷ ಅಜಯ್ ಎ.ಜೆ ವಹಿಸಿದ್ದರು. ಭಾಗವಹಿಸಿದ್ದ ತಾ| ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಅಮೆಚೂರ್‌ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಲ. ನಾಮದೇವ ರಾವ್ ಮುಂಡಾಜೆ, ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ತಾ| ಪ್ರ. ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ಯುವ ವೇದಿಕೆ ಅಧ್ಯಕ್ಷ ಶಜೇಶ್ ಧರ್ಮಸ್ಥಳ, ರಾಜ್ಯ ಉಪಾಧ್ಯಕ್ಷ ಎ.ಸಿ ಮ್ಯಾಥ್ಯೂ, ಪ್ರ. ಕಾರ್ಯದರ್ಶಿ ಫ್ರಾನ್ಸಿಸ್ ವಿ. ವಿ, ದ.ಕ ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಕೃಷ್ಣಾನಂದ ರಾವ್, ಸಂಘದ ಉಪಾಧ್ಯಕ್ಷ ಅಂಟನಿ ಧರ್ಮಸ್ಥಳ, ಸೆಬಾಸ್ಟಿಯನ್ ಕಾಯರ್ತಡ್ಕ, ಬಿಜು ವೇಣೂರು, ಪ್ರದೀಪ್ ವಗ್ಗ, ಜೋಜೋ ತೋಟತ್ತಾಡಿ, ಎನ್. ಟಿ ಜೋನಿ ಅಣಿಯೂರು, ವಿಶಾಲ್ ಅಗಸ್ಟಿನ್ ನಡ, ಬರ್ಕ್‌ಮೆನ್ಸ್ ಬೆಳ್ತಂಗಡಿ, ಇವರುಗಳು ಸಲಹೆ ಸೂಚನೆ ನೀಡಿದರು.
ಕ್ರಿಶ್ಚಿಯನ್ ಅಸೋಸಿಯೇಶನ್ ತಾ| ಪ್ರ. ಕಾರ್ಯದರ್ಶಿ ವಿನ್ಸೆಂಟ್ ಬಂಗಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜೋಸೆಫ್ ಧರ್ಮಸ್ಥಳ ಧನ್ಯವಾದವಿತ್ತರು.
ಮಾ. 4 ರಂದು ನಡೆಯುವ ರಾಜ್ಯ ಮಟ್ಟದ ಈ ಮ್ಯಾಟ್ ಕಬಡ್ಡಿ ಪಂದ್ಯಾಟ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ರಾಜ್ಯದ ಆಹ್ವಾನಿತ 16 ಬಲಿಷ್ಟ ತಂಡಗಳು ನಾಕೌಟ್ ಮಾದರಿಯಲ್ಲಿ ಪಂದ್ಯಾಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.