ಚಾರ್ಮಾಡಿ : ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಕಾರ್ಯಾಲಯವನ್ನು ಕಕ್ಕಿಂಜೆ ಪಂಚಶ್ರೀ ಗ್ರೂಪ್ನ ದಯಾಕರ ಕಕ್ಕಿಂಜೆ ಉದ್ಘಾಟಿಸಿದರು. ಉಗ್ರಾಣವನ್ನು ಚಾರ್ಮಾಡಿ ಬಾಬು ಮೂಲ್ಯ ಉದ್ಘಾಟಿಸಿದರು. ಅನ್ನ ಛತ್ರವನ್ನು ಪ್ರಗತಿಪರ ಕೃಷಿಕರು ಮಠದ ಮಜಲು ಅನಂತ ರಾವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮೊಕ್ತೆಸರಾದ ಕೃಷ್ಣರಾವ್ ಕೋಡಿತ್ತಿಲ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾಶಿವ ಭಟ್, ಅರ್ಚಕ ಶ್ರೀನಿವಾಸ ಉಪಾಧ್ಯಯ, ಸಹ ಮೊಕ್ತೆಸರ ಕೇಶವ ಮೂಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಕೊರಗಪ್ಪ ಗೌಡ ಅರಣೆಪಾದೆ, ಉಮೇಶ ಗೌಡ ಅಂತರಮನೆ, ಅಶೋಕ ಜೈನ್ ಹಳೆಕಕ್ಕಿಂಜೆ, ಜೊತೆ ಕಾರ್ಯದರ್ಶಿ ಗಣೇಶ ಕೋಟ್ಯಾನ್, ಅಮರೇಂದ್ರ ಕೊಳಂಬೆ, ಜಯಾನಂದ ನಡ್ತಿಲು, ಯಶೋದರ ವಳಸರಿ, ಗೌರವ ಸಲಹೆಗಾರ ವೆಂಕಟರಮಣ ಗೌಡ ಮುದ್ದೊಟ್ಟು, ಉಗ್ರಾಣ ಸಮಿತಿ ಸಂಚಾಲಕ ರಾಮಣ್ಣ ಪಂಡಿತರು ಮುಂತಾದವರು ಉಪಸ್ಥಿತರಿದ್ದರು.