ಬೆಳಾಲು : ಆರ್‌ಎಸ್‌ಎಸ್ ಪಥಸಂಚಲನ ಮತ್ತು ಶಾಖಾ ವಾರ್ಷಿಕೋತ್ಸವ

ಬೆಳಾಲು : ಬೆಳಾಲು ಗ್ರಾಮದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್‌ನ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಅನಂತೋಡಿ ಭಜನಾ ಮಂದಿರದಿಂದ ಸರಸ್ವತಿ ಶಾಲೆಯ ತನಕ ಭಗವಾಧ್ವಜ ಮತ್ತು ಘೋಷ್ ವಾದ್ಯದೊಂದಿಗೆ ನಡೆಯಿತು.
ಸಂಚಲನದಲ್ಲಿ ಗ್ರಾಮದ ಬಾಲಕರು ಮತ್ತು ತರುಣರು ಸೇರಿ ಒಟ್ಟು 120 ಸಂಖ್ಯೆಯಲ್ಲಿ ಸ್ವಯಂಸೇವಕರು ಪೂರ್ಣ ಗಣವೇಶದಲ್ಲಿ ಭಾಗವಹಿಸಿದ್ದರು. ನಂತರ ನಡೆದ ಬೆಳಾಲು ಶಾಖಾ ವಾರ್ಷಿಕೋತ್ಸವದಲ್ಲಿ ಸ್ವಯಂಸೇವಕರು ಉಪವಿಷ್ಠ ವ್ಯಾಯಾಮ ಹಾಗೂ ಸೂರ್ಯನಮಸ್ಕಾರದ ಪ್ರದರ್ಶನ ಮಾಡಿದರು. ಶಾಖಾ ವಾರ್ಷಿಕೋತ್ಸವದ ಬೌದ್ಧಿಕ್‌ನ್ನು ಬಂಟ್ವಾಳದ ಪ್ರಜ್ವಲ್ ಕುಮಾರ್ ಮಾಡಿದರು.
ಉಜಿರೆ ಕಾರ್ಯವಾಹ ಪ್ರಶಾಂತ್ ಉಜಿರೆ, ಸೀತಾರಾಮ ಬಿ.ಎಸ್, ವೆಂಕಟೇಶ್ ಬೆಳಾಲು, ಮುಖ್ಯ ಶಿಕ್ಷಕ್ ರಾಧಾಕೃಷ್ಣ ಮಾರ್ಪಳ, ಗುರುಕಿರಣ್, ಅಶ್ವಿತ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.