HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ : ತಂದೆಯಿಂದ ಮಗನ ಹತ್ಯೆ

ಬೆಳ್ತಂಗಡಿ, : ಕಸಬಾ ಗ್ರಾಮದ ಮಟ್ಲ ಎಂಬಲ್ಲಿನ ನಿವಾಸಿ ನವೀನ್(28 ವ)ರವರನ್ನು ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಂದೆ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಇಬ್ಬರೂ ಸೇರಿಕೊಂಡು ಚೂರಿಯಿಂದ ಹೊಟ್ಟೆಯ ಭಾಗಕ್ಕೆ, ತೊಡೆಗೆ ತಿವಿದ ಪರಿಣಾಮವಾಗಿ ಗಂಭೀರ ಗಾಯಗೊಂಡು ಮೃತ ಪಟ್ಟ ಘಟನೆ ನಿನ್ನೆ(ಫೆ.11) ರಾತ್ರಿ 9 ಗಂಟೆಗೆ ಸುಮಾರಿಗೆ ನಡೆದಿದೆ.
ಬೆಳ್ತಂಗಡಿಯಲ್ಲಿ ಜ್ಯೋತಿಷಿಗಳಾಗಿರುವ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಕೊಲೆ ಆರೋಪಿಗಳಾಗಿದ್ದಾರೆ. ನವೀನರವರು ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದರು.
ಕಳೆದ ಡಿ. 31ರಂದು ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡುವ ಸಂದರ್ಭದಲ್ಲಿ ಮೃತ ನವೀನನಿಗೆ ಹಾಗೂ ತಂದೆ ಮಂಜುನಾಥ ರವರಿಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ನವೀನರವರು ಮಂಜುನಾಥರವರಿಗೆ ಹೊಡೆದಿದ್ದನು. ಅದೇ ದ್ವೇಷದಿಂದ ಫೆ. 11ರಂದು ರಾತ್ರಿ ಸುಮಾರು 9 ಗಂಟೆ ಸಮಯಕ್ಕೆ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೋ ಕಾರಣದಲ್ಲಿ ಮಾತಿಗೆ ಮಾತು ಬೆಳೆದು ಮಂಜುನಾಥ ಹಾಗೂ ರಾಘವೇಂದ್ರ ಎಂಬವರು ಸೇರಿಕೊಂಡು ನವೀನನ ಹೊಟ್ಟೆಯ ಭಾಗಕ್ಕೆ ಹಾಗೂ ತೊಡೆಗೆ ಚೂರಿಯಿಂದ ಇರಿದೆರನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತ ನವೀನ್ ಅವರಿಗೆ ವಿವಾಹವಾಗಿದ್ದು, ಪತ್ನಿ ಇಬ್ಬರು ಮಕ್ಕಳಿದ್ದಾರೆ. ಇವರು ಮೂಲತಃ ಹಾಸನ ಮೂಲದವರಾಗಿದ್ದು, ಸುಡುಗಾಡು ಸಿದ್ದ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಘಟನೆಯ ಬಳಿಕ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ.
ಈ ಬಗ್ಗೆ ನವೀನ್ ಪತ್ನಿ ಬೇಬಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.