ಕಾವು ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಕ್ಕಡ: ಶ್ರೀ ತ್ರಿಗುಣಾತ್ಮಿಕ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಾವು ಕೌಕ್ರಾಡಿ ಇದರ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ. ಡಿ ವಿರೇಂದ್ರ ಹೆಗ್ಗಡೆಯವರು ಶ್ರೀಧಾಮ ಮಾಣಿಲದ  ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಫೆ.5ರಂದು ಬಿಡುಗಡೆಗೊಳಿಸಿದರು.
ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಾ.೧೮ರಿಂದ ೨೩ರ ವರೆಗೆ ವಿಜೃಂಭನೆಯಿಂದ ನೆರವೇರಲಿದೆ. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪಿ ಕುಶಾಲಪ್ಪ ಗೌಡ, ಉಪಾಧ್ಯಕ್ಷರಾದ ಆನಂದ ರೈ, ಕಾರ್ಯದರ್ಶಿ ಜಿನ್ನಪ್ಪ ಪರಕ್ಕೆ, ಜೀರ್ಣೋದ್ಧಾರ ಸಮಿಯ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ, ಪ್ರಧಾನ ಸಲಹೆಗಾರರಾದ ಎನ್. ಈಶ್ವರ ಭಟ್ ಕೊಡೆಂಕಿರಿ, ಸಲಹೆಗಾರರಾದ ಶ್ರೀಧರ ಗೌಡ ಕೆಂಗುಡೇಲು ಕಾರ್ಯದರ್ಶಿಗಳಾದ ಡಾ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಡಾ ಮೋಹನ್‌ದಾಸ್ ಗೌಡ, ದಾಮೋದರ ಶೆಟ್ಟಿ ನೂಜೆ, ನಾಗೇಶ್ ನಳಿಯಾರ್, ಜಿನ್ನಪ್ಪ ಗೌಡ ಬದಿಯಡ್ಕ, ಸೇಸಪ್ಪ ಗೌಡ ಬದಿಯಡ್ಕ ಹಾಗೂ ಮತ್ತಿತರ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.