ಶ್ರೀಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಪಡಂಗಡಿ : ಶ್ರೀ ಕ್ಷೇತ್ರ ಒಡೀಲು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಓಡೀಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಗಣೇಶ್ ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಕೊಯ್ಯೂರು ವಿದ್ವಾನ್ ಎಂ.ಎ. ನಂದಕುಮಾರ್ ತಂತ್ರಿ, ಶ್ರೀ ಕ್ಷೇತ್ರ ಓಡೀಲು ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಬಂಗೇರ, ತಾ.ಪಂ ಸದಸ್ಯ ಗೋಪಿನಾಥ್ ನಾಯಕ್, ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ರಾಜ್ಯ ಜೈನ್ ಸ್ವಯಂಸೇವಕರ ಸಂಘದ ಜಿಲ್ಲಾ ಸಂಚಾಲಕ ವೃಷಭ ಆರಿಗ, ಪಡಂಗಡಿ ಮಲ್ಲಿಪಾಡಿ ದೇವಸ್ಥಾನದ ಅಧ್ಯಕ್ಷ ಅಮರನಾಥ ಹೆಗ್ಡೆ, ಪೆರಣಮಂಜ ಮೂಜಿಲ್ನಾಯ ದೇವಸ್ಥಾನದ ನೇಮಿರಾಜ ಶೆಟ್ಟಿ, ಬದ್ಯಾರು ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್, ಹಂಸಗಿರಿ ಪಾಲುದಾರ ಬಾಲಕೃಷ್ಣ ಸಿ. ನಾಯ್ಕ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಜಯಕರ ಶೆಟ್ಟಿ, ಅಭಿಜಿತ್ ಕುಲಾಲ್ ಓಡೀಲು, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಗಂಗಾಧರ ರಾವ್ ಕೆವುಡೇಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.