ಜಂತಿಗೋಳಿ: ಬಸ್ಸು ತಂಗುದಾಣ ಲೋಕಾರ್ಪಣೆ

ನಾರಾವಿ : ನಾರಾವಿ ಲಯನ್ಸ್ ಕ್ಲಬಿಗೆ ರಾಜ್ಯಪಾಲರಾದ ಲಯನ್ ಎಚ್.ಆರ್ ಹರೀಶ್ ಅಧಿಕೃತ ಭೇಟಿನೀಡಿ ಕೊಕ್ರಾಡಿ ಗ್ರಾಮದ ಜಂತಿಗೋಳಿ ಎಂಬಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಮಾಡಿ ಒಂದು ಉತ್ತಮ ಬಸ್ಸು ತಂಗುದಾಣ ಕೊಕ್ರಾಡಿ ಜನತೆಗೆ ಈಗಿನ ನಾರಾವಿ ಲಯನ್ಸ್ ಕ್ಲಬ್ ನೀಡಿದ್ದು, ದಣಿದವರಿಗೆ ನೆರಳು ನೀಡುವ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಈ ಕಾರ್‍ಯ ಎಲ್ಲಾ ಸಂಸ್ಥೆಗಳಿಂದ ನಡೆಯಲಿ ಎಂದು ದೀಪ ಬೆಳಗುವುದರ ಮುಖೇನ ಉದ್ಘಾಟಿಸಿದರು,
ಈ ಸಂದರ್ಭದಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ನಾರಾವಿ ಲಯನ್ಸ್ ಸಂಸ್ಥೆಗೆ ಶುಭಹಾರೈಸಿ ತಂಗುದಾಣದ ಅಗತ್ಯತೆಯ ಬಗ್ಗೆ ತಿಳಿಸಿದರು.
ಪ್ರಾಂತೀಯ ಅದ್ಯಕ್ಷ ಲ| ನಿತ್ಯಾನಂದ ನಾವರ ವಲಯ ಅಧ್ಯಕ್ಷ ಲ| ವೆಂಕಟೇಶ ಪ್ರಭು, ಲ| ರಾಮಕೃಷ್ಣ ಗೌಡ. ಲ| ಪ್ರೇಮ್ ಕುಮಾರ್ ಹೊಸ್ಮಾರು, ನಾರಾವಿ ಗ್ರಾ.ಪಂ ಅಧ್ಯಕ್ಷ ಲ|ರವೀಂದ್ರ ಪೂಜಾರಿ, ಬಾಂದೊಟ್ಟು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಲ| ವಿನಯ್ ಹೆಗ್ಡೆ ನಾರಾವಿ, ಲಯನ್ಸ್ ಪೂರ್ವಾಧ್ಯಕ್ಷ ರಾಮಚಂದ್ರ ಭಟ್ ಕಕ್ಕುಜೆ, ಕೊಕ್ರಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಲ| ಜಗದೀಶ ಹೆಗ್ಡೆ ,ಲ| ಗುಣಪಾಲ ಪೂವಾಣಿ, ಲ| ವಿಜಯಕುಮಾರ್ ನೂರಳ್‌ಬೆಟ್ಟು, ಲ| ಬಾಬುಶೆಟ್ಟಿ ನಾರಾವಿ, ಲ| ಶಮಂತ್ ಕುಮಾರ್ ಪಡಂಗಡಿ, ಲ| ಶಶಿಕಾಂತ ಆರಿಗ, ಸುಕುಮಾರ ಭಂಗ, ಶೀನಪೂಜಾರಿ, ವೀರೇಂದ್ರ ಜೈನ್, ದಿವಾಕರ ಪೂಜಾರಿ ಕುತ್ಲೂರು, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶ್ರೀಧರ ಪೂಜಾರಿ, ಧನಕೀರ್ತಿ ಜೈನ್, ಅರುಣೋದಯ ಯುವಕ ಮಂಡಲ ಮರೋಡಿ ಗೌರವ ಅಧ್ಯಕ್ಷ ಫಕೀರಬ್ಬ, ನಾರಾವಿ ಗ್ರಾ.ಪಂ ಸದಸ್ಯ ಪ್ರಮೀಳಾ ಆರ್ ಭಟ್, ಲ| ವಿಲಿಯಂ ಕೋಡ್ದೇರು ಲ| ಧನಂಜಯ್ ಕುಮಾರ್ ಉಪಸ್ಥಿತರಿದ್ದರು. ಲಯನ್ಸ್ ಕಾರ್‍ಯದರ್ಶಿ ಲ| ಅಜಿತ್ ಕುಮಾರ್ ಕೊಕ್ರಾಡಿ ಸ್ವಾಗತಿಸಿ, ಲ| ಜಯರಾಜ ಕಾಡ ಧನ್ಯವಾದವಿತ್ತರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.