ಡಿವೈಎಫ್‌ಐ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಪತ್ರಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಝೈಬುನ್ನಿಸ, ಪೂಜಾ, ದಾನಮ್ಮ, ಧನ್ಯಶ್ರೀ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು, ಕೆ.ಆರ್.ಪೇಟೆಯ ಸೆಂಟ್ರಲ್ ಸ್ಕೂಲ್ ಹಾಸ್ಟೆಲ್ ನ ಝೈಬುನ್ನಿಸ ಪ್ರಕರಣದ ಸಿಒಡಿ ತನಿಖೆ ನಡೆಸಿ ವಿದ್ಯಾ ಸಂಸ್ಥೆಯ ಅವ್ಯವಹಾರಗಳನ್ನು ಬಯಲಿಗೆ ತಂದು ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಸಂತ್ರಸ್ಥ ಕುಟುಂಬಗಳಿಗೆ ತಲಾ ೫೦ ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಡಿವೈಎಫ್‌ಐ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಇಂದು (ಜ.30) ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಡಿವೈಎಫ್‌ಐ ತಾಲೂಕು ಅಧ್ಯಕ್ಷ ಧನಂಜಯ ಪಟ್ರಮೆ, ಕಾರ್ಯದರ್ಶಿ ವಿಠಲ ಮಲೆಕುಡಿಯ, ಅವರ ನಾಯಕತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿಎಂಭಟ್ ಉದ್ಘಾಟಿಸಿ ಮಾತಾಡಿದರು. ಡಿವೈಎಫ್‌ಐ ಮುಖಂಡರುಗಳಾದ ಹನೀಫ್, ಹನ್ಸಪ್, ಆರೀಶ್, ಶರೀಫ್, ಕೃಷ್ಣಪ್ಪ, ಮಹೇಂದ್ರ, ಇಸ್ಮಾಯಿಲ್ ಕೊಕ್ಕಡ, ರಝಾಕ್ ಬದ್ಯಾರು, ಲಾನ್ಸಿ, ರಾಮಚಂದ್ರ, ದಿನೇಶ್ ನಾಯ್ಕ್, ಸಿಪಿಯಂ ತಾಲೂಕು ಸಮಿತಿ ಸದಸ್ಯರುಗಳಾದ ಶ್ಯಾಮರಾಜ್ ಪಟ್ರಮೆ, ನೆಬಿಸ, ಜಯರಾಂ ಮಯ್ಯ, ಲೋಕೇಶ್ ಕುದ್ಯಾಡಿ, ಸಂಜೀವ ನಾಯ್ಕ್, ಡೊಂಬಯ ಗೌಡ, ಮಹಮದ್ ಅನಸ್, ಲಕ್ಷ್ಮಣ ಗೌಡ, ಮೊದಲಾದವರು ಉಪಸ್ಥಿತರಿದ್ದರು. ರೈತಮುಖಂಡ ಚನಿಯಪ್ಪ ಯಂ.ಕೆ, ಜೆಎಮ್ ಎಸ್ಸಿನ ಕಿರಣಪ್ರಭಾ , ಕುಮಾರಿ, ಜಯಶ್ರಿ, ಪುಷ್ಪ, ಅಪ್ಪಿ, ಅನುರಾಧ, ಸವಿತ ಸೌಜನ್ಯನಗರ, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.