ಝೈಬುನ್ನಿಸಾ’ಳ ಸಂಶಯಾಸ್ಪದ ಮರಣದ ಉನ್ನತ ತನಿಖೆಗೆ ಉಪ್ಪಿನಂಗಡಿ ಎಸ್ಸೆಸ್ಸೆಫ್ ಕ್ಯಾಂಪಸ್ ಮನವಿ

ಇತ್ತೀಚೆಗೆ ಮಂಡ್ಯ ಕೆ.ಆರ್ ನಗರದ ತನ್ನ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ ಝೈಬುನ್ನಿಸಾಳ ಸಾವಿಗೆ ಕಾರಣನಾದ ದೈಹಿಕ ಶಿಕ್ಷಕ ರವಿ ಶಿವಕುಮಾರ್ ಎಂಬಾತನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮತ್ತು ಈ ಒಂದು ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಉಪ್ಪಿನಂಗಡಿ ಉಪ ತಹಶೀಲ್ದಾರರ ಮುಖಾಂತರ ಎಸ್ಸೆಸ್ಸೆಫ್ ಉಪ್ಪಿನಂಗಡಿ ಕ್ಯಾಂಪಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಶೀಘ್ರವಾಗಿ ಮರಣೋತ್ತರ ವರದಿ ಬಿಡುಗಡೆ ಗೊಳಿಸುವುದು. ಕುಟುಂಬಕ್ಕೆ ಕನಿಷ್ಠ ೨೫ ಲಕ್ಷ ಪರಿಹಾರ ನೀಡುವುದು. ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ಕಲ್ಪಿಸುವಂತೆಯೂ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿವಿಶನ್ ನಾಯಕರಾದ ಇಲ್ಯಾಸ್ ಲತೀಪಿ, ಎನ್.ಎಂ.ಶರೀಫ್ ಸಖಾಪಿ, ಮುಹಮ್ಮದ್ ಅಲೀ, ಮುಸ್ತಫಾ ಯು.ಪಿ. ಅಬ್ದುರ್ರಝಾಕ್ ಲತೀಪಿ, ಅಬ್ದುರ್ರಹ್ಮಾನ್ ಪದ್ಮುಂಜ, ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಹಾರಿಸ್ ಬೇಂಗಿಲ, ಸಿದ್ದೀಕ್, ಸಫ್ವಾನ್, ಸಲೀಂ, ಶಿಹಾಬ್, ಮುರ್ಶಿದ್ ಮೊದಲಾದ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.