ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪರಸ್ಪರ ಸಹಕಾರದ ಬದುಕೇ ನಿಜವಾದ ಮಾನವ ಧರ್ಮ: ಪ್ರಕಾಶ್ ಶೆಟ್ಟಿ

ಧಾರ್ಮಿಕ ಕಾರ್ಯಕ್ರಮ: ಕಟ್ಟೆ ಪೂಜೆ ಉತ್ಸವ
ಜ.೨೦ರಂದು ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಗಣಪತಿ ಹವನ, ೧೧.೩೦ಕ್ಕೆ ಮಹಾಪೂಜೆ, ನಿತ್ಯಬಲಿ, ಧ್ವಜಾರೋಹಣ, ಸಂಜೆ ೬ರಿಂದ ರಂಗಪೂಜೆ, ಬಲಿ ಮಹಾಪೂಜೆ, ಜ.೨೧ರಂದು ಬೆಳಗ್ಗೆ ೮.೩೦ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಬಲಿ ಸಂಜೆ ೬ರಿಂದ ರಂಗಪೂಜೆ, ಬಲಿ ವಸಂತ ಕಟ್ಟೆಪೂಜೆ ಜರುಗಿತು.
ಜ.೨೨ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೬ರಿಂದ ರಂಗಪೂಜೆ, ಬಲಿ, ಮಹಾಪೂಜೆ, ಜ.೨೩ರಂದು ಬೆಳಗ್ಗೆ ೧೦.೩೦ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಬಲಿ ಸಂಜೆ ೬ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ, ಶಯನ ಪೂಜೆ, ಕವಾಟ ಬಂಧನ ಜ.೨೪ರಂದು ಬೆಳಗ್ಗೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ೧೧.೩೦ರಿಂದ ಚೂರ್ಣೋತ್ಸವ, ಬಲಿ, ಮಹಾಪೂಜೆ, ಸಂಜೆ ೫ರಿಂದ ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ, ಮೂಜಿಲ್ನಾಯ, ಕಲ್ಕುಡ ಕಲ್ಲುರ್ಟಿ ದೈವಗಳಿಗೆ ಗಗ್ಗರ ಸೇವೆ, ನಿತ್ಯಪೂಜೆ, ಉತ್ಸವ ಬಲಿ ವಸಂತ ಕಟ್ಟೆ ಪೂಜೆ ಅವಭೃತ ಮಂಗಲ ಸ್ನಾನ ಮೊದಲಾದ ಕಾರ್ಯಕ್ರಮಗಳು ಜರುಗಿತು. ಜ.೨೫ರಂದು ಗಣಪತಿ ಹವನ, ನವಕ ಕಲಶ, ಮಹಾಪೂಜೆ, ಸಂಪ್ರೋಕ್ಷಣೆ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ವಿಧಿಗಳು ಜರುಗಲಿದೆ.

ತೆಂಕಕಾರಂದೂರು: ನಾವು ಬದುಕುವುದರೊಂದಿಗೆ ಇತರರನ್ನು ಬದುಕಲು ಬಿಡುವುದೇ ನಿಜವಾದ ಮಾನವ ಧರ್ಮವಾಗಿದೆ. ಇದನ್ನು ನಮ್ಮ ಹಿರಿಯರು ಪರಂಪರೆಯಿಂದ ಅನುಸರಿಸಿಕೊಂಡು ಬಂದಿದ್ದಾರೆ ಎಂದು ಲಾಯಿಲ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದರು.
ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ತೆಂಕಕಾರಂದೂರು ಇದರ ವರ್ಷಾವಧಿ ಜಾತ್ರ ಮಹೋತ್ಸವವು ಜ.೨೦ರಿಂದ ಜ.೨೪ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಜ.೨೧ರಂದು ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಪ್ರಕಾಶ್ ಶೆಟ್ಟಿ ನೊಚ್ಚ ಅವರು ಧರ್ಮ ಹಾಳಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಧರ್ಮ ಹಾಳಾಗಿಲ್ಲ, ನಾವು ಧರ್ಮ ಮಾರ್ಗದಲ್ಲಿ ನಡೆಯುತ್ತೇವೆಯೇ ಎಂಬ ಬಗ್ಗೆ ಚಿಂತನೆ ಮಾಡಿಕೊಳ್ಳಬೇಕು. ದೇವರ ಮೇಲೆ ನಂಬಿಕೆ, ಭಕ್ತಿ ಬೇಕು. ಪ್ರತಿ ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಬರುವ ರೂಢಿ ಬೆಳೆಸಿಕೊಳ್ಳಬೇಕು. ದೇವಸ್ಥಾನದಲ್ಲಿ ಸ್ವಚ್ಛತೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಮನೆಯಲ್ಲಿ ಭಜನೆ ಮಾಡಿಸುವುದು, ದೇವಸ್ಥಾನಗಳಿಗೆ ಕರೆದುಕೊಂಡು ಬಂದು ನಮ್ಮ ಧರ್ಮ, ದೇವರು, ಆಚರಣೆಗಳ ಕುರಿತು ತಿಳುವಳಿಕೆ ನೀಡಿದರೆ ಧರ್ಮ ಬೆಳೆಯಲು ಕಾರಣವಾಗುತ್ತದೆ ಇದರ ಬಗ್ಗೆ ಪೋಷಕರು ಚಿಂತನೆ ನಡೆಸಬೇಕು ಎಂದು ಸಲಹೆಯಿತ್ತರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಕೆ.ಡಿ.ಆರ್.ಡಿ.ಪಿ. ಬೆಳ್ತಂಗಡಿಯ ಯೋಜನಾಧಿಕಾರಿ ಜಯಕರ ಶೆಟ್ಟಿಯವರು ಮಾತನಾಡಿ ದೇವಸ್ಥಾನದ ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಧರ್ಮದ ಉಳಿವಿಗೆ ಪೂರಕವಾಗಿದೆ. ನಮ್ಮ ಮಕ್ಕಳಿಗೆ ಧಾರ್ಮಿಕ ಸಾಂಸ್ಕಾರ ನೀಡುವ ಕೆಲಸಗಳಾಗಬೇಕು. ನಾವು ಧರ್ಮ ಮಾರ್ಗದಲ್ಲಿ ನಡೆದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಪತ್ತಿನ ಸಹಕಾರಿ ಸಂಘ ಪಡಂಗಡಿ ಇದರ ಅಧ್ಯಕ್ಷ ಕೆ.ಎಸ್. ಯೋಗೀಶ್ ಕುಮಾರ್ ನಡಕರ ಅವರು ಮಾತನಾಡಿ, ನಮ್ಮ ಸಂಸ್ಕೃತಿಯ ಕೇಂದ್ರ ದೇವಸ್ಥಾನ, ಹಿಂದೆ ಕೂಡುಕುಟುಂಬ ಪದ್ಧತಿ ಇದ್ದಾಗ ಎಲ್ಲರೂ ಒಟ್ಟು ಸೇರುವ ಸಂಪ್ರಾದಾಯವಿತ್ತು. ಈಗ ಊರಿನ ಜಾತ್ರೆಯಲ್ಲಿ ಎಲ್ಲರೂ ಒಟ್ಟು ಸೇರುವ ಅವಕಾಶವಿದೆ. ಇದು ಊರಿನ ಸಂಘಟನೆಗೂ ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಹಲವಾರು ನಾಟಕಗಳನ್ನು ರಚಿಸಿರುವ ಅನಂತ ಎಸ್. ಇರ್ವತ್ರಾಯ ಇವರನ್ನು ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಇದರ ಕಲಾವಿದರ ವತಿಯಿಂದ ಗಣ್ಯರು, ಶಾಲು ಹೊದಿಸಿ, ಪೇಟೆ ಹಾಗೂ ಉಂಗುರ ತೊಡಿಸಿ ಆತ್ಮೀಯವಾಗಿ ಗೌರವಿಸಿದರು. ವೇದಿಕೆಯಲ್ಲಿ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಕೃಷ್ಣ ಸಂಪಿಗೆತ್ತಾಯ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ಜಾತ್ರಾ ಸಮಿತಿ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.
ವಿಷ್ಣುಮೂರ್ತಿ ಭಜನಾ ಮಂಡಳಿಯ ಕಿರಿಯ ಸದಸ್ಯರ ಪ್ರಾರ್ಥನೆ ಬಳಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಮೂಲ್ಯ ಕಲಿಕಾ ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಕಜೆಬೆಟ್ಟು ಧನ್ಯವಾದವಿತ್ತರು.
ಸಂಜೆ ೬.೩೦ರಿಂದ ಪೆರೋಡಿತ್ತಾಯ ಕಟ್ಟೆ ಮತ್ತು ಧರ್ಮಶ್ರೀ ಅಂಗನವಾಡಿ ಕೇಂದ್ರದ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಸಭಾ ಕಾರ್ಯಕ್ರಮದ ಬಳಿಕ ಶ್ರೀ ವಿಷ್ಣುಕಲಾ ವಿದೆರ್ ಮದ್ದಡ್ಕ ಇವರ ಅಭಿನಯದ `ಆ.. ನಾಗಮಚ್ಚೆ’ ಭಕ್ತಿಪ್ರಧಾನ ತುಳು ನಾಟಕ ಪ್ರದರ್ಶನಗೊಂಡಿತು. ಅನುವಂಶಿಕ ಆಡಳಿತ ಮೊಕ್ತೇಸರರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಅರ್ಚಕ ವೃಂದ, ಎಸ್.ಕೆ.ಡಿ.ಆರ್.ಡಿ.ಪಿ, ಪ್ರಗತಿಬಂಧು ಒಕ್ಕೂಟಗಳು, ಮಿತ್ರ ಯುವಕ ಮಂಡಲ, ಶ್ರೀ ವಿಷ್ಣು ಬಳಗ ಕಟ್ಟೆ ಹಾಗೂ ಊರ ಹತ್ತು ಸಮಸ್ತರು ಜಾತ್ರೋತ್ಸವದ ಯಶಸ್ವಿಗೆ ಶ್ರಮಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.