ಸೌಹಾರ್ದ ಕರ್ನಾಟಕ ಧ್ಯೇಯ: ಜ. 30 : ಬೆಳ್ತಂಗಡಿ ಬಸ್ಟ್ಯಾಂಡ್‌ನಲ್ಲಿ 2 ಸಾವಿರಕ್ಕೂ ಮಿಕ್ಕಿದ ಜನರಿಂದ ಮಾನವ ಸರಪಳಿ

ಬೆಳ್ತಂಗಡಿ : ಸೌಹಾರ್ದತೆಗಾಗಿ ಕರ್ನಾಟಕ ಎಂಬ ಧ್ಯೇಯದಡಿ ಪ್ರಗತಿಪರ ಚಿಂತಕರು ಮತ್ತು ಸಂಘಟನೆಗಳು ಸಹಭಾಗಿತ್ವದೊಂದಿಗೆ ಜ. 30 ರಂದು ಬೆಳ್ತಂಗಡಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಸೇರಿ ಮಾನವ ಸರಪಳಿ ನಿರ್ಮಿಸಲಾಗುವುದು, ಸಂಜೆ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಸಕ ವಸಂತ ಬಂಗೇರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರುಗಳು, ರಾಜಕೀಯ ಸಾಮಾಜಿಕ ಕ್ಷೇತ್ರದ ಗಣ್ಯರುಗಳನ್ನು ಆಹ್ವಾನಿಸುವುದೆಂದು ನಿರ್ಧಾರಕ್ಕೆ ಬರಲಾಯಿತು.
ಜ. 24 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಸೌಹಾರ್ದ ಕರ್ನಾಟಕ ಮಾನವ ಸರಪಳಿ ಕಾರ್ಯಕ್ರಮ ತಾಲೂಕು ಸಂಚಲನಾ ಸಮಿತಿ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾ| ಸಂಚಾಲಕ ಶಿಬಿ ಧರ್ಮಸ್ಥಳ ವಹಿಸಿದ್ದರು. ಪ್ರಸ್ತಾವನೆಯನ್ನು ನ್ಯಾಯವಾದಿ ಶಿವಕುಮಾರ್ ಎಮ್.ಎಸ್. ನಡೆಸಿದರು. ವಿಷಯ ಮಂಡನೆಯನ್ನು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜಾ ನಡೆಸಿಕೊಟ್ಟರು. ವೇದಿಕೆಯಲ್ಲಿ ಉಮರ್‌ಕುಂಞಿ ಮುಸ್ಲಿಯಾರ್, ತಾ. ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಚಂದು ಎಲ್. ಉಸಪಸ್ಥಿತರಿದ್ದರು.
ಸಭೆಯಲ್ಲಿ ಬಿ.ಕೆ. ವಸಂತ್, ಅಶ್ರಫ್ ನೆರಿಯ, ಕಾಸಿಂ ಮಲ್ಲಿಗೆಮನೆ, ನ್ಯಾಯವಾದಿಗಳಾದ ಸುಕನ್ಯಾ ಮತ್ತು ನವಾಝ್ ಶರೀಫ್ ಮತ್ತು ಬಿ.ಎಮ್. ಭಟ್, ಸಿಂದೂ ದೇವಿ, ಯು.ಕೆ. ಮುಹಮ್ಮದ್ ಹನೀಫ್ ಉಜಿರೆ, ಸಲೀಮ್ ಗುರುವಾಯನಕೆರೆ, ಮೋಹನ್ ಕುಮಾರ್ ಕಲ್ಮಂಜ, ನೇಮಿರಾಜ್ ಕೆ ಕಿಲ್ಲೂರು, ಚೆನ್ನಕೇಶವ, ಸೋಮೇ ಗೌಡ, ಅಣ್ಣು ಸಾಧನಾ, ಹರಿದಾಸ್ ಎಸ್.ಎಮ್, ಸಿರಾಜ್ ಚಿಲಿಂಬಿ, ಅಬ್ದುಲ್ಲತೀಫ್, ಅಶ್ರಫ್ ನಿಡಿಗಲ್, ಇ.ಕೆ. ಬಶೀರ್ ವಗ್ಗ, ಇಲ್ಯಾಸ್ ಅಹಮ್ಮದ್ ಕಕ್ಕಿಂಜೆ, ಶಫಿ ಬಂಗಾಡಿ, ಜಯರಾಮಯ್ಯ, ರಾಮಚಂದ್ರ, ಧನಂಜಯ, ಲೋಕೇಶ್ ಕುದ್ಯಾಡಿ, ಆಬಿದ್ ಅಲಿ, ಅನೀಸ್, ಪ್ರಶಾಂತ್, ಪ್ರಶಾಂತ್ ಮಚ್ಚಿನ ಅಬ್ದುಲ್ ಲೆತೀಫ್, ಅಜಯ್ ಎ.ಜೆ. ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.