ಶಿರ್ಲಾಲು ದೈವಸ್ಥಾನದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು : ಶ್ರೀ ಪಿಲಿಚಾಮುಂಡಿ ದೈವಸ್ಥಾನ ಶ್ರೀ ಕ್ಷೇತ್ರ ಬಗ್ಯೊಟ್ಟು ಶಿರ್ಲಾಲು ಇಲ್ಲಿ ದೈವಗಳ ಬಿಂಬ ಸಾನಿಧ್ಯದೊಂದಿಗೆ ನೇಮೋತ್ಸವವು ಫೆ.18 ರಿಂದ 19 ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ.21 ರಂದು ಶ್ರೀ ಕ್ಷೇತ್ರ ಬಗ್ಯೊಟ್ಟು ಶಿರ್ಲಾಲುವಿನಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷ ಕೆ.ವಸಂತ ಸಾಲಿಯನ್ ಕಾಪಿನಡ್ಕ ಬಿಡುಗಡೆ ಗೊಳಿಸಿ ದೈವಸ್ಥಾನದ ಕಾರ್ಯಕ್ರಮವು ಯಾವುದೇ ಅಡಚಣೆಯಿಲ್ಲದೆ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಹೆಚ್ ನಿತ್ಯಾನಂದ ಶೆಟ್ಟಿ ನೊಚ್ಚ, ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಹರ್ಷ ಆರ್.ಜೈನ್ ಕಾಯರಡ್ಕ ಗುತ್ತು, ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಬಂಗೇರ, ಪ್ರಧಾನ ಸಂಚಾಲಕ ಸುಂದರ ಬುನ್ನಾಲ್, ಕೋಶಾಧಿಕಾರಿ ಪ್ರಕಾಶ್ ಕುಮಾರ್ ಜೈನ್, ಜೊತೆ ಕಾರ್ಯದರ್ಶಿ ಸುಜಾತ ಚಿದಾನಂದ, ಪ್ರಧಾನ ಅರ್ಚಕ ಸೂರ್ಯನಾರಾಯಣ ರಾವ್, ಶಿರ್ಲಾಲು ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಶಿರ್ಲಾಲು ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಗ್ರಾ.ಪಂ ಸದಸ್ಯ ಧರ್ಣಪ್ಪ ಪೂಜಾರಿ ಮಡೆಮಾರ್ ಹಾಗೂ ಸೇವಾ ಪ್ರತಿನಿಧಿಗಳು, ಊರವರು, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.