ತಣ್ಣೀರುಪಂತ ಗ್ರಾ.ಪಂ: ರೂ.5.58 ಕೋಟಿ ವೆಚ್ಚದ ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ

Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತು ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸುಮಾರು 5.58 ಕೋಟಿ ವೆಚ್ಚದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಶಾಸಕ ಕೆ. ವಸಂತ ಬಂಗೇರ ಜ.23ರಂದು ಶಿಲಾನ್ಯಾಸವನ್ನು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ರಾಜ್ಯದಲ್ಲಿ ಅತೀ ಹೆಚ್ಚು ತಾಲೂಕುಗಳನ್ನು ಹೊಂದಿದ ಕ್ಷೇತ್ರವಾಗಿದೆ. 2008ರಲ್ಲಿ ತಾಲೂಕು ಹೇಗಿತ್ತು ಈಗ 2017ರಲ್ಲಿ ಹೇಗಿದೆ ಎಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದು ಜನರೇ ವಿಮರ್ಶೆ ಮಾಡಿಕೊಳ್ಳಲಿ. ತಾಲೂಕಿನಲ್ಲಿ ಇದುವರೆಗೆ 1 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದು ತಿಳಿಸಿದರು.
ಪ.ಜಾತಿ, ಪ.ಪಂಗಡದ ಕಾಲನಿಗಳ 600 ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇನ್ನೂ 400 ರಸ್ತೆಗಳಿಗೆ ಅನುದಾನ ಮಂಜೂರಾಗಿದ್ದು, ಇದರ ಕೆಲಸಗಳು ಶೀಘ್ರವಾಗಿ ನಡೆಯಲಿದೆ. ಇಂದು ಅನೇಕ ರಸ್ತೆಗಳ ಕಾಂಕ್ರಿಟೀಕರಣಕ್ಕೆ, ಕಿಂಡಿಅಣೆಕಟ್ಟಿಗೆ ಶಿಲಾನ್ಯಾಸ ನಡೆಸಿದ್ದೇನೆ ಈ ಕಾಮಗಾರಿಗಳು ಶೀಘ್ರವಾಗಿ ಪೂರ್ತಿಗೊಂಡು ಇದರ ಸದುಪಯೋಗ ಜನರಿಗೆ ದೊರೆಯಲಿ ಇನ್ನು ಮೂರು ತಿಂಗಳ ಕಾಲಾವಕಾಶಗಳಿದ್ದು, ಈ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅನುದಾನವನ್ನು ತಾಲೂಕಿಗೆ ತರಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು.
ಶಿಲಾನ್ಯಾಸ ನಡೆಸಲಾದ ಕಾಮಗಾರಿಗಳ ವಿವರ: ತಣ್ಣೀರುಪಂತ ಗ್ರಾಮದ ಕರಾಯ-ಕಾಪಿಕಾಡು ರಸ್ತೆ ಕಾಂಕ್ರಿಟೀಕರಣ ರೂ.50 ಲಕ್ಷ, ಕರಾಯಕೋಡಿ-ಮುಗ್ಗ ರಸ್ತೆ ಕಾಂಕ್ರಿಟೀಕರಣ (ಕಿಂಡಿ ಅಣೆಕಟ್ಟು ಸಹಿತ) ರೂ.1.60 ಲಕ್ಷ,
ಕರಾಯ-ಕಡ್ತಿಮಾರ್ ರಸ್ತೆ ಕಾಂಕ್ರಿಟೀಕರಣ (ಶಾಸಕರ ವಿಶೇಷ ಅನುದಾನ) ರೂ.10 ಲಕ್ಷ, ಶಿವಗಿರಿ-ಕುಕ್ಕಾಜೆ ರಸ್ತೆ ಕಾಂಕ್ರಿಟೀಕರಣ ರೂ. 53 ಲಕ್ಷ, ಕಲ್ಲೇರಿ- ಕಂಚರೆಕೋಡಿ ರಸ್ತೆ ಕಾಂಕ್ರಿಟೀಕರಣ ರೂ. 75 ಲಕ್ಷ, ಕಲ್ಲೇರಿ- ಹಾಕೋಟೆ ರಸ್ತೆ ಕಾಂಕ್ರಿಟೀಕರಣ ರೂ.25 ಲಕ್ಷ, ಆದಿನಾಥೇಶ್ವರ ಬಸದಿ ರಸ್ತೆ ಹಾಗೂ ಕಲ್ಲೇರಿ ಕ್ವಾಟರ್ಸ್ ರಸ್ತೆ ಕಾಂಕ್ರಿಟೀಕರಣ ರೂ. 25 ಲಕ್ಷ, ತುರ್ಕಳಿಕೆ- ಬಿಕ್ರಿಮಾರು ರಸ್ತೆ ಕಾಂಕ್ರಿಟೀಕರಣ ರೂ. 25 ಲಕ್ಷ, ಹಿರ್ತಡ್ಕ ಕಿಂಡಿಅಣೆಕಟ್ಟು ರೂ. 50 ಲಕ್ಷ, ದೈಪಿಲ-ಮುಗ್ಗ ರಸ್ತೆ ಕಾಂಕ್ರಿಟೀಕರಣ ರೂ. 25 ಲಕ್ಷ, ಉರ್ನಡ್ಕ ರಸ್ತೆ ಕಾಂಕ್ರಿಟೀಕರಣ ರೂ. 50 ಲಕ್ಷ, ತಣ್ಣೀರುಪಂತ ಕೊಡಂಗೆ ರಸ್ತೆ ಕಾಂಕ್ರಿಟೀಕರಣ (ಶಾಸಕರ ವಿಶೇಷ ಅನುದಾನ) ರೂ. 10 ಲಕ್ಷ ಒಟ್ಟು 5.58 ಕೋಟಿ. ಈ ಸಂದರ್ಭದಲ್ಲಿ ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ತಾ.ಪಂ. ಸದಸ್ಯೆ ಕೇಶವತಿ, ಗ್ರಾ.ಪಂ ಉಪಾಧ್ಯಕ್ಷ ಕೇಶವ ನಾಯ್ಕ್, ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ, ಅಯೂಬ್, ನವೀನ್ ಕುಮಾರ್, ಹೇಮಾವತಿ ಚಂದ್ರಶೇಖರ್, ಕೈರುನ್ನೀಸಾ, ಅಬ್ದುಲ್‌ರಹಿಮಾನ್, ಸುಮ, ಮೈಮುನಾ, ಸದಾನಂದ ಶೆಟ್ಟಿ ಮಡಪ್ಪಾಡಿ, ಸೂರಪ್ಪ ಬಂಗೇರ, ಆದಂ, ಶಾಲೆಟ್‌ವಾಜ್, ತಾಜುದ್ಧೀನ್, ಗೀತಾ ವಿಠಲ್ ಶೆಟ್ಟಿ, ಭಾರತಿ ನಾಯ್ಕ, ತಣ್ಣೀರುಪಂತ ಸಿ.ಎ ಬ್ಯಾಂಕ್ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು, ದುಗ್ಗಪ್ಪ ಗೌಡ ಪೊಸಂದೋಡಿ, ಅಜಿತ್‌ಕುಮಾರ್ ಹಲೇಜಿ, ಮೋಹನ್ ಗೌಡ ಕಲ್ಮಂಜ, ದಿನೇಶ್ ಗೌಡ ಪೊಸಂದೋಡಿ, ಗುಣಕರ ಕಲ್ಲಾಪು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.