ಹತ್ಯಡ್ಕ ರೆಖ್ಯ ಶಾಖಾ ಕಟ್ಟಡ ಶ್ರೀನಿಧಿ ಉದ್ಘಾಟನೆ

Advt_NewsUnder_1
Advt_NewsUnder_1

ರೆಖ್ಯ : ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘದ ರೆಖ್ಯ ಶಾಖಾ ಕಟ್ಟಡ ಶ್ರೀನಿಧಿ ಇದರ ಉದ್ಘಾಟನಾ ಸಮಾರಂಭವು ಜ. 21ರಂದು ಜರಗಿತು.
ಕಟ್ಟಡದ ಉದ್ಘಾಟನೆಯನ್ನು ದ.ಕ.ಜಿ.ಕೇ.ಸ. ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎ. ಜಗನ್ನಾಥ ಗೌಡ ವಹಿಸಿದ್ದರು. ಶಾಸಕ ಕೆ. ವಸಂತ ಬಂಗೇರ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಬಿ. ನಿರಂಜನ ಬಾವಂತಬೆಟ್ಟು ಭದ್ರತಾ ಕೋಶ ಉದ್ಘಾಟಿಸಿದರು. ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ಗಣಕಯಂತ್ರ ಹಾಗೂ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದರು. ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್‌ಕ ಸೌರವಿದ್ಯುತ್ ದೀಪ ಉದ್ಘಾಟಿಸಿದರು.
ಈ ಸಂದರ್ಭ ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಿಪ್ರಸಾದ್, ರೆಖ್ಯ ಶ್ರೀ ಗುಡ್ರ್ರಾಮಲ್ಲೇಶ್ವರ ದೇವಸ್ಥಾನ ಗುಡ್ರಾದಿಯ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಎಂಜಿರ ಹಾ.ಉ.ಸ.ಸಂಘದ ಅಧ್ಯಕ್ಷ ಪಿ.ಟಿ ಮ್ಯಾಥ್ಯು, ಅರಸಿನಮಕ್ಕಿ ಗ್ರಾ.ಪಂ. ಸದಸ್ಯರಾದ ಪಿ.ಕೆ ಪ್ರಕಾಶ್, ಶ್ರೀಮತಿ ಗಾಯತ್ರಿ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಶಕುಂತಳಾ ಆಚಾರ್, ಶ್ರೀಮತಿ ನಳಿನಿ, ಶ್ರೀಮತಿ ಸುಂದರಿ, ಬ್ಯಾಂಕಿನ ಉಪಾಧ್ಯಕ್ಷ ಎಂ.ಕೇಶವ ರಾವ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರತಿನಿಧಿ ಸಿರಾಜುದ್ದೀನ್, ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಶಾಸಕ ವಸಂತ ಬಂಗೇರರನ್ನು ಸನ್ಮಾನಿಸಲಾಯಿತು. ಗಿರಿಯಪ್ಪ ಬಂಗೇರ ರೆಖ್ಯ ಹಾಗೂ ನಿರ್ದೇಶಕ ಎಂ.ಎ ದೇವಸ್ಯರವರನ್ನು ಗೌರವಿಸಲಾಯಿತು. ರೆಖ್ಯ ಗ್ರಾಮಸ್ಥರಿಂದ ಹತ್ಯಡ್ಕ ಬ್ಯಾಂಕಿನ ಅಧ್ಯಕ್ಷ ಎ. ಜಗನ್ನಾಥ ಗೌಡರವರನ್ನು ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.