ಬೆಳ್ತಂಗಡಿ ಸುದ್ದಿ ಪ್ರತಿನಿಧಿಗಳ ವಾರ್ಷಿಕ ಸಮ್ಮಿಲನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸುದ್ದಿಬಿಡುಗಡೆ ವಾರ ಪತ್ರಿಕೆ ಬೆಳ್ತಂಗಡಿ ಇದರ ಪ್ರತಿನಿಧಿಗಳ ವಾರ್ಷಿಕ ಸಭೆಯು ಜ.20ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಹಾಲಿಂಗ ಗೌಡ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಪ್ರ. ಸಂಪಾದಕ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ಮುಖ್ಯಸ್ಥರಾಗಿರುವ ಡಾ. ಯು.ಪಿ. ಶಿವಾನಂದ, ವೆಂಕಟ್ರಮಣ ಪೈ, ಜಯಂತಿ ಪಾಲೇದು, ಕಾಸಿಂ ಪದ್ಮುಂಜ, ಸುದ್ದಿ ಬೆಳ್ತಂಗಡಿ ವ್ಯವಸ್ಥಾಪಕ ಮಂಜುನಾಥ ರೈ, ಮುಖ್ಯ ವರದಿಗಾರ ಬಿ.ಎಸ್. ಕುಲಾಲ್, ಜಾಹಿತಾತು ವಿಭಾಗದ ಮುಖ್ಯಸ್ಥ ತುಕಾರಾಮ್, ಪ್ರಸರಣ ವಿಭಾಗದ ಮುಖ್ಯಸ್ಥ ಪಿ. ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.
ಕು| ಸತ್ಯಶ್ರೀ ಗೇರುಕಟ್ಟೆ ಪ್ರಾರ್ಥನೆ ಹಾಡಿ, ಸಹಾಯಕ ವ್ಯವಸ್ಥಾಪಕ ಪಿ. ಜಾರಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುದ್ದಿ ಪ್ರತಿನಿಧಿಗಳು ಹಾಗೂ ಕಛೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.