ಹೊಕ್ಕಿಲ ಗುತ್ತು ಗದ್ದೆಯಲ್ಲಿ ಕೆಸರುಡೊಂಜಿ ದಿನ ಫ್ರೆಂಡ್ಸ್ ಟ್ರೋಫಿ ಗ್ರಾಮೀಣ ಕ್ರೀಡಾಕೂಟ

ಕೆಸರಿನಲ್ಲಿ ಕ್ರೀಡೆ ನಮ್ಮ ಸಂಸ್ಕೃತಿಯನ್ನು ಪ್ರೀತಿಸಲು ಪ್ರೇರಣೆದಾಯಕ : ಹರೀಶ್ ಪೂಂಜ

ನಡ : ಕೆಸರಿನಲ್ಲಿ ನಮ್ಮ ಮೈಯೊಡ್ಡಿ ನಡೆದಾಗ ಕೆಲವೊಂದು ಚರ್ಮವ್ಯಾದಿಗಳಿಗೆ ಪರಿಹಾರ ಲಭಿಸಲಿದ್ದು ಜೊತೆಗೆ ನಮ್ಮ ಮಣ್ಣನ್ನು ಪ್ರೀತಿಸಲು, ಕೃಷಿ ಪರಂಪರೆಗೆ ನಮ್ಮಲ್ಲಿ ಮತ್ತೊಮ್ಮೆ ಒಲವು ಮೂಡಲು ಪ್ರೇರಣಾದಾಯಕವಾಗಿದೆ ಎಂದು ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಹೇಳಿದರು.
ಹೊಕ್ಕಿಲ ಗುತ್ತು ಕುತ್ರೋಟ್ನಾಯ ದೈವದ 11ನೇ ವರ್ಷದ ದೊಂಪದ ಬಳಿ ಜಾತ್ರೆಯ ಪ್ರಯುಕ್ತ ಹೊಕ್ಕಿಲಗುತ್ತು ಗದ್ದೆಯಲ್ಲಿ ಕೆಸರುಡೊಂಜಿ ದಿನ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಹಾಗೂ ತಾಲೂಕು ಮಟ್ಟದ ಪುರುಷರ 550 ಕೆ.ಜಿ. ವಿಭಾಗದ ಕೆಸರುಗದ್ದೆ ಹಗ್ಗ ಜಗ್ಗಾಟ ಫ್ರೆಂಡ್ ಟ್ರೋಫಿ- 2018 ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಹಗ್ಗ ಜಗ್ಗಾಟದಲ್ಲಿ ಬಹುಮಾನ ವಿಜೇತರು:
550 ಕೆ.ಜಿ. ವಿಭಾಗದಲ್ಲಿ ಪುರುಷರಿಗಾಗಿ ಹಮ್ಮಿಕೊಂಡಿದ್ದ ಕೆಸರಿನಲ್ಲಿ ಹಗ್ಗಜಗ್ಗಾಟದ ಪ್ರಥಮ ಸ್ಥಾನವನ್ನು ಸ್ವಾತಿ ಫ್ರೆಂಡ್ಸ್ ಬೆಳ್ತಂಗಡಿ, ದ್ವಿತೀಯ ಸ್ಥಾನವನ್ನು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಕುತ್ತಿನ, ತೃತೀಯ ಸ್ಥಾನವನ್ನು ಶ್ರೀರಾಮ ಫ್ರೆಂಡ್ಸ್ ಹೊಕ್ಕಿಲ ಮತ್ತು ಚತುರ್ಥ ಸ್ಥಾನವನ್ನು ಶ್ರೀ ಜೈ ಹನುಮಾನ್ ಮಂಜೊಲ್‌ಪಲ್ಕೆ ತಂಡಗಳು ತಮ್ಮದಾಗಿಸಿಕೊಂಡವು. ಉಳಿದಂತೆ ಮಹಿಳೆಯರಿಗೆ ಮಕ್ಕಳಿಗೆ ಮನೋರಂಜನಾತ್ಮಕ ರೀತಿಯಲ್ಲಿ ಹಮ್ಮಿಕೊಂಡಿದ್ದ ಕೆಸರಿನ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಸಂಜೆ ನಡೆದು ಸಭೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ತಾ| ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಲಾಯಿಲದ ಯುವ ಉದ್ಯಮಿ ಪ್ರೇಮ್‌ರಾಜ್ ರೋಶನ್ ಸಿಕ್ವೇರಾ (ಮುನ್ನಾ), ಗ್ರಾ. ಯೋಜನೆಯ ನಿರ್ದೇಶಕ ಮಹಾವೀರ ಅಜ್ರಿ ಇವರುಗಳು ಜೊತೆಯಾಗಿ ಟ್ರೋಫಿಗಳನ್ನು ವಿತರಿಸಿದರು.
ಈ ಸಮಾರಂಭದಲ್ಲಿ ಸ.ಪ. ಕಾಲೇಜು ಪ್ರಾಧ್ಯಾಪಕರಾಗಿರುವ ಮಾಜಿ ಸೈನಿಕ ಹರೀಶ್ ರೈ ಪಿ. ಅವರನ್ನು ಸನ್ಮಾನಿಸಲಾಯಿತು.
ಅರವಿಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಗೌಡ ಹೊಕ್ಕಿಲ ಸನ್ಮಾನಿತರ ಪರಿಚಯ ಮಂಡಿಸಿದರು. ದಿವಾಕರ ಗೌಡ ಸ್ವಾಗತಿಸಿದರು. ಪ್ರಜ್ವಲ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.