ಹೊಳೆಯುವ ನಕ್ಷತ್ರಗಳು – ಬೀದಿ ನಾಟಕ

ಬೆಳ್ತಂಗಡಿ : ಕಪುಚಿನ್ ಕೃಷಿಕಾ ಸೇವಾ ಕೇಂದ್ರ ವಿಮುಕ್ತಿ ಲಾಯಿಲ ಇದರ ಆಶ್ರಯದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮಿಲಾಗ್ರಿಸ್ ಚರ್ಚ್ ಕಲ್ಯಾಣಪುರ ಇಲ್ಲಿಯ ವಿದ್ಯಾರ್ಥಿಗಳಿಂದ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ರಕ್ಷಣೆಯ ಸಾಮಾಜಿಕ ನಾಟಕ ಹೊಳೆಯುವ ನಕ್ಷತ್ರಗಳು ಇಂದು(ಜ. 19) ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಜರುಗಿತು.
ಮಕ್ಕಳ ಮೇಲಿನ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ, ಮಾರಾಟದ ಬಗ್ಗೆ ಹಾಗೂ ಇದರಿಂದ ಆಗುವ ಅನಾಹುತಗಳ ಕುರಿತು ವಿದ್ಯಾರ್ಥಿಗಳು ಅಭಿನಯಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ವಿಮುಕ್ತಿ ನಿರ್ದೇಶಕ ಫಾ| ವಿನೋದ್ ಮಸ್ಕರೇನ್ಹಸ್ ಹಾಗೂ ಸಂಸ್ಥೆಯ ಕಾರ್ಯಕರ್ತರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.